ಅನಂತಕುಮಾರ ಹೆಗಡೆ ಗೆಲುವು: ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ


ಗೋಕರ್ಣ: ಆರನೇ ಬಾರಿಗೆ ಸಂಸದರಾಗಿ ಅಧಿಕ ಮತದ ಅಂತರದಿಂದ ಆಯ್ಕೆಯಾದ ಅನಂತಕುಮಾರ ಹೆಗಡೆ ಮತ್ತು ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿ.ಜೆ.ಪಿ. ಬಹುಮತ ಪಡೆದ ಪ್ರಯುಕ್ತ ಇಲ್ಲಿನ ಜಿ.ಜೆ.ಪಿ. ಕಾರ್ಯಕರ್ತರಿಂದ ಸಂಭ್ರಮಾಚರಣೆ ಗುರುವಾರ ಸಂಜೆ ನಡೆಯಿತು. ಇಲ್ಲಿನ ಸುಭಾಷ ಚೌಕದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಜೈ ಮೋದಿಜೀ, ಜೈ ಅನಂತಕುಮಾರ ಜಯಘೋಷ ಮೊಳಗಿತು. ಬಿ.ಜೆ.ಪಿ.ಹಿರಿಯ ಸದಸ್ಯ ಡಾ. ಎಸ.ವಿ. ಜಠಾರ, ವಸಂತ ಶೆಟ್ಟಿ, ಜಯರಾಮ ಹೆಗಡೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಮಾಜಿ ಗ್ರಾಂ. ಪಂ. ಅಧ್ಯಕ್ಷ ನಾಗರಾಜ ಹಿತ್ಲಮಕ್ಕಿ, ಗಣಪತಿ ನಾಯ್ಕ, ಸುಜಯ ಶೆಟ್ಟಿ, ರಮೇಶ ಪ್ರಸಾದ, ಮಹೇಶ ಶೆಟ್ಟಿ, ಗಣೇಶ ಗಣಿಯನ್ ಮಾರುತಿ ಅಡ್ಪೇಕರ, ಸುರೇಂದ್ರ ಟೆಂಗ್ಸೆ, ವಿನಾಯಕ ಮಾಂದ್ರೇಕರ, ಕುಮಾರ ದಿವಟಗಿ ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.