ಅನಂತಕುಮಾರ ಹೆಗಡೆಗೆ ಶಾಸಕ ಕಾಗೇರಿ ಶುಭಹಾರೈಕೆ

ಶಿರಸಿ: 2019ರ ಲೋಕಸಭಾ ಚುನಾವಣೆಯ ಫಲಿತಾಂಶ ನಿರೀಕ್ಷಿತವಾಗಿದ್ದು, ಕಳೆದ ಐದು ವರ್ಷಗಳ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಕಾರ್ಯ ವೈಖರಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಮೂಲಕ ತಿಳಿಯುತ್ತದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಈ ಐತಿಹಾಸಿಕ ಚುನಾವಣೆ ಹಲವಾರು ವಿಕ್ರಮಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದಲ್ಲದೇ, ಅತ್ಯಧಿಕ ಮತಗಳ ಅಂತರದ ಗೆಲುವನ್ನು ನಮ್ಮ ಕೆನರಾ ಕ್ಷೇತ್ರದ ಜನ ಬಿಜೆಪಿಗೆ ನೀಡಿದ್ದಾರೆ. ಜನರು ಬಿಜೆಪಿಯ ಮೇಲೆ ಇಟ್ಟಿರುವ ವಿಶ್ವಾಸ ದೇಶದ ವಿಕಾಸದ ವೇಗವನ್ನು ಹೆಚ್ಚಿಸುವುದರೊಂದಿಗೆ ಮೋದಿಜಿಯವರ ನೇತೃತ್ವದಲ್ಲಿ ಮುನ್ನಡೆಯುವ ಈ ದೇಶದ ಭವಿಷ್ಯ ಭದ್ರಗೊಳ್ಳಲಿದೆ.

ನಮ್ಮ ಕೆನರಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳಿಂದ ಆಯ್ಕೆಯಾದ ಅನಂತ ಕುಮಾರ ಹೆಗಡೆಯವರಿಗೆ ಹಾಗೂ ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು, ಬಿ.ಜೆ.ಪಿಯನ್ನು ಬೆಂಬಲಿಸಿದ ಎಲ್ಲ ಜನತೆಗೆ ಶಾಸಕ ಕಾಗೇರಿ ಧನ್ಯವಾದ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.