ಅನಂತಕುಮಾರ ಹೆಗಡೆಗೆ ಗೆಲುವು: ಇಂದು ಹುಟ್ಟೂರಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ


ಶಿರಸಿ: ಲೋಕಸಭಾ ಚುನಾವಣೆ 2019ರಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಸತತ 6 ನೇ ಬಾರಿಗೆ ಲೋಕಸಭೆಗೆ ಕೆನರಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.

ಹಿಂದೂ ಹೃದಯ ಸಾಮ್ರಾಟ ಅನಂತಕುಮಾರ ಹೆಗಡೆಯವರು ಗೆಲುವಿನ ಸಂಭ್ರಮದೊಂದಿಗೆ ಮೇ.23 ರಂದು ಸಂಜೆ 4:30 ಸರಿಯಾಗಿ ಶಿರಸಿಯ ನಿಲೇಕಣಿಯ ಮಾರ್ಗವಾಗಿ ಶ್ರೀ ಮಾರಿಕಾಂಬೆ ದೇವಿಯ ದರ್ಶನ ಪಡೆದು ಅಲ್ಲಿಂದ ವಿವೇಕಾನಂದ ನಗರದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ಕೊಡಲಿದ್ದಾರೆ.

ಮಧ್ಯಾಹ್ನ 4:30ಕ್ಕೆ ಹುಟ್ಟೂರು ಶಿರಸಿಗೆ ಆಗಮಿಸಲಿರುವ ಹೆಗಡೆ, ಇದಕ್ಕೂ ಮೊದಲು ಕುಮಟಾದ ಎ.ವಿ ಬಾಳಿಗಾ ಕಾಲೇಜು ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಸಂಭ್ರಮ ಹಂಚಿಕೊಂಡು ಶಿರಸಿಗೆ ಆಗಮಿಸುವರು. ಕುಮಟಾ- ಶಿರಸಿ ಮಾರ್ಗ ಮಧ್ಯೆ ಹತ್ತಾರು ಬೂತ್ ಮಟ್ಟದ ಕಾರ್ಯಕರ್ತರಿಂದ ಹೆಗಡೆ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತಿದೆ.

ಅಭಿಮಾನಿಗಳು ಶುಭ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅನಂತಕುಮಾರರಿಗೆ ಶುಭ ಹಾರೈಸಬೇಕೆಂದು ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.