ಲೋಕಸಭಾ ಚುನಾವಣೆ 2019: ಅನಂತಕುಮಾರ್ ಪಡೆದ ಮತಗಳೆಷ್ಟು ಗೊತ್ತೇ..??

ಕಾರವಾರ: ಉತ್ತರ ಕನ್ನಡ ಬಿಜೆಪಿ ಲೋಕ ಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಅಂತಿಮ ಹಂತದ ಮತ ಎಣಿಕೆಯ ಫಲಿತಾಂಶದಲ್ಲಿ ಒಟ್ಟೂ 7,83,211 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಸತತ 6 ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಒಟ್ಟೂ 1153480 ಮತದಾರರು ಮತಚಲಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ 4,79,649 ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಿರುದ್ಧ ಗೆಲುವು ಸಾಧಿಸಿ, ಶೇ. 68.15 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಆನಂದ ಅಸ್ನೋಟಿಕರ್ 306393 ಮತಗಳನ್ನಷ್ಟೇ ಪಡೆದು ಕೇವಲ ಶೇ. 26.56 ರಷ್ಟನ್ನು ಮಾತ್ರ ಪಡೆದುಕೊಳ್ಳಲು ಶಕ್ಯವಾಗಿದ್ದು, ತೀವೃ ಮುಖಭಂಗ ಅನುಭವಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.