ಅಂತರ್ಜಾತಿ ವಿವಾಹವಾದ ಪ್ರೇಮಿಗಳು: ಎರಡೂ ಕುಟುಂಬದ ಮಧ್ಯೆ ಮಾರಾಮಾರಿ

ಶಿರಸಿ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿಯನ್ನು ಬೇರ್ಪಡಿಸಲು ಎರಡೂ ಕುಟುಂಬಗಳು ಬಡಿದಾಡಿಕೊಂಡು ಒಟ್ಟೂ ಆರು ಜನರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬನವಾಸಿ ಬಳಿಯ ಕಿರವತ್ತಿ ಬಳಿ ನಡೆದಿದೆ.

ಹುಡುಗನ ಸಂಬಂಧಿಕರಾದ ಕಿರವತ್ತಿಯ ಫಕಿರಪ್ಪ ಹರಿಜನ (32) ಬಂಗಾರಪ್ಪ ಚನ್ನಯ್ಯ, ಹುಡುಗಿಯ ಸಂಬಂಧಿಕರಾದ ಸೊರಬದ ಹೊಳೆಯಪ್ಪ ಶಾನವಳ್ಳಿ, ಗುಡ್ಡಪ್ಪ, ಮೈನಾರಪ್ಪ, ಸುರೇಶ, ಮಲ್ಲೇಶಪ್ಪ ಶಾನವಳ್ಳಿ, ಶಿವಲಿಂಗಪ್ಪ ಮಡಿವಾಳ ಆರೋಪಿತರಾಗಿದ್ದಾರೆ. ಹುಡುಗಿಯ ಸಂಬಂಧಿಕರಾದ ಮೈಲಾರಪ್ಪ, ಸುರೇಶ, ಗುಡ್ಡಪ್ಪ, ಹೊಳೆಯಪ್ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ. ಎರಡೂ ಕಡೆಯವರು ಠಾಣೆಯಲ್ಲಿ ದೂರು ನೀಡಿದ್ದು, ಒಬ್ಬರಿಗೊಬ್ಬರು ಹೊಡೆದಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದಾರೆ.

ಗಾಯಗೊಂಡ ಫಕಿರಪ್ಪ ಹರಿಜನ ಅವರ ಅಳಿಯ ಕೃಷ್ಣ ಚೆನ್ನಯ್ಯ ಎಂಬ ಬನವಾಸಿಯ ಯುವಕ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿಯ ಮಡಿವಾಳ ಜನಾಂಗದ ಹೋಮ್ ನರ್ಸ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಯುವತಿಯನ್ನು ಎಂಟು ದಿನದ ಹಿಂದೆ ಬೆಂಗಳೂರಿನಲ್ಲಿ ಮದುವೆಯಾಗಿದ್ದ.

ಆದರೆ‌ ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ಕುಟುಂಬದವರು ವಿರೋಧವ್ಯಕ್ತಪಡಿಸಿದ್ದರು. ಇನ್ನು ಇವರಿಬ್ಬರೂ ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ದಾಖಲೆ ಇರದ ಹಿನ್ನೆಲೆ ಯಲ್ಲಿ ಯುವತಿ ಕುಟಂಬದವರು ಮದುವೆಯಾಗಿ ಬನವಾಸಿಯ ತಮ್ಮ ಮನೆಗೆ ಯುವತಿಯೊಂದಿಗೆ ಬಂದಿದ್ದ ವಿಷಯವನ್ನು ಅರಿತು ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ ಎನ್ನುವರು ತನ್ನ ಕುಟುಂಬ ಹಾಗೂ ಸಂಬಂಧಿಗಳೊಂದಿಗೆ ಬನವಾಸಿಗೆ ತೆರಳಿ ಯುವತಿಯನ್ನು ಅಪಹರಿಸಿ ತರುವ ಪ್ರಯತ್ನ ಮಾಡಿದಾಗ ಗಲಾಟೆ ನಡೆದಿದೆ.

ಹುಡುಗಿಯ ಸಂಬಂಧಿಕರು ಬಂದ ವೇಳೆ ನವಜೋಡಿಗಳು ಮನೆಯಲ್ಲಿಲ್ಲದ ಕಾರಣ ಯುವಕನ ಸಹೋದರ ಹಾಗೂ ಮಾವನಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ . ಈ ವೇಳೆ ಎರಡೂ ಕುಟುಂಬದವರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ . ಒಟ್ಟು ಆರು ಜನರಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಮ್ಮೆ ಮದುವೆ: ಇನ್ನು ಇವರ ಪ್ರೀತಿಗೆ ದಾಖಲೆ ಇಲ್ಲದೇ ಇರುವುದು ಅಡ್ಡಿಯಾಗಿದ್ದರಿಂದ ಊರಿನವರೇ ಇಂದು ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ. ಕಳೆದ ಕೆಲವು ದಿನದ ಹಿಂದಷ್ಟೇ ಯುವತಿ ಕಡೆಯವರು ಯುವಕನ ವಿರುದ್ಧ ಬನವಾಸಿ ಠಾಣೆಯಲ್ಲಿ ದೂರು ನೀಡಿದ್ದರು. ಇಬ್ಬರೂ ವಯಸ್ಕರಾದ್ಧರಿಂದ ರಾಜಿ ಮಾಡಿಸಿ ಇಬ್ಬರ ಕುಟುಂಬದವರನ್ನು ಕಳುಹಿಸಲಾಗಿತ್ತು. ಆದರೇ ಹುಡುಗಿಯ ಕುಟುಂಬದವರು ಅಂತರ್ಜಾತಿಯ ವಿವಾಹ ಎನ್ನುವ ಕಾರಣಕ್ಕೆ ಯುವತಿಯನ್ನು ಬೇರ್ಪಡಿಸಿಲು ಪ್ರಯತ್ನಿಸಿದರು .ಇದೇ ವಿಷಯ ಇಬ್ಬರು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.