60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಕುಮಟಾ ಆಸ್ಪತ್ರೆಯಲ್ಲಿ ಸಾವು

ಕುಮಟಾ: ಸುಮಾರು 60 ವರ್ಷ ಪ್ರಾಯದ ಅಪರಿಚಿತ ಗಂಡಸು ಕಳೆದ 5 ದಿನಗಳ ಹಿಂದೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ ಮೇ. 18ರಂದು ಬೆಳಿಗ್ಗೆ 9 ಗಂಟೆಗೆ ಮತಪಟ್ಟಿದ್ದಾರೆ.

ಮೃತ ಅಪರಿಚಿತ ಗಂಡಸಿನ ಮೈ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಟೀಶರ್ಟ, ನೀಲಿ ಬಣ್ಣದ ಚಕ್ಸ ಲುಂಗಿ, ಎಡಕೈಯಲ್ಲಿ ಬಂಗಾರ ಬಣ್ಣದ ವಾಚ್ ಧರಿಸಿರುತ್ತಾರೆ. ಮೃತನ ಹತ್ತಿರವಿದ್ದ ಪ್ಲಾಸ್ಟಿಕ್ ಚೀಲವನ್ನು ತೆಗೆದು ನೋಡಿದಾಗ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ರೂಮಿನ ರಸೀದಿ ಸಿಕ್ಕಿದ್ದು, ಅದರಲ್ಲಿ ಹೆಸರು ನಾರಾಯಣ ಎಮ್. ಮಂಜೇಶ್ವರ, ಹೊಸಂಗಡಿ ರೇಲ್ವೆ ಹತ್ತಿರವೆಂದು ನಮೂದಿರುತ್ತದೆ. ಮೃತವ್ಯಕ್ತಿಯ ಕುಟುಂಬದ ಪೋಟೋ ಸಿಕ್ಕಿದ್ದು, ವ್ಯಕ್ತಿಯ ವಿಳಾಸ ಪತ್ತೆಯಾಗಬೇಕಾಗಿದೆ.

ಈ ಮೇಲ್ಕಂಡ ಚಹರೆಯುಳ್ಳ ಗಂಡಸು ತಮ್ಮ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದಲ್ಲಿ ಅಥವಾ ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಲ್ಲಿ ಕುಮಟಾ ಪೊಲೀಸ್ ಠಾಣೆಗೆ ತಿಳಿಸಲು ಕೋರಿದೆ. ಕುಮಟಾ ಪೊಲೀಸ ಠಾಣೆ ಪೋನ್ ನಂ : 08386-222333, 9480805272, ಜಿಲ್ಲಾ ನಿಸ್ತಂತು ಕೇಂದ್ರ ಕಾರವಾರ : 08382-226550.

Categories: ಜಿಲ್ಲಾ ಸುದ್ದಿ

Leave A Reply

Your email address will not be published.