ಗಾಂಧಿ ಕುರಿತು ಅನಂತಕುಮಾರ ಹೇಳಿಕೆ: ಜಿಲ್ಲಾ ಕಾಂಗ್ರೆಸ್‍ನಿಂದ ಶಿರಸಿಯಲ್ಲಿ ಪ್ರತಿಭಟನೆ


ಶಿರಸಿ: ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಕುರಿತಂತೆ ಮಾಡಿರುವ ಟ್ವೀಟ್ ಹೇಳಿಕೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮಧ್ಯಪ್ರದೇಶದ ಭೂಪಾಲ್ ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞ್ಯಾ ಠಾಕೂರ್ ಗಾಂಧಿ ಕೊಂದ ಗೋಡ್ಸೆ ದೇಶಭಕ್ತ ಎಂದು ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿ ಸಚಿವ ಹೆಗಡೆ ಟ್ವೀಟ್ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿ, ನಗರದ ಬಿಡ್ಕಿಬೈಲಿನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕಾಂಗ್ರೆಸ್ಸಿಗರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಖಂಡಿಸಿದರು.

ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿಯವರನ್ನು ಇಡೀ ದೇಶ ಪೂಜ್ಯ ಭಾವನೆಯಿಂದ ನೋಡುತ್ತಿರುವಾಗ ಕೆಲ ದುಷ್ಟಶಕ್ತಿಗಳು ಗಾಂಧೀಜಿ ಕುರಿತು ಅವಹೇಳನಾಕಾರಿ ಮಾತನಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇಂತಹರಿಗೆ ಸಮಾಜ ತಕ್ಕ ಪಾಠ ಕಲಿಸಬೇಕು. ಅನಂತಕುಮಾರ, ನಳೀನ್ಕುಾಮಾರಂತಹವರು ಸಾರ್ವಜನಿಕ ಜೀವನದಲ್ಲಿರುವುದು ಯೋಗ್ಯವಲ್ಲ. ಬಿಜೆಪಿಗೆ ನೈತಿಕತೆ ಇದ್ದರೇ ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಪಕ್ಷದ ಪ್ರಮುಖರಾದ ಸುಜಾತಾ ಗಾಂವಕರ, ಅಬ್ಬಾಸ್ ತೋನ್ಸೆ, ಎಸ್.ಕೆ.ಭಾಗವತ್, ಸುಮಾ ಉಗ್ರಾಣಕರ್, ಕೆ.ಜಿ.ನಾಗರಾಜ, ಜಗದೀಶ ಗೌಡ, ಎಂ.ಆಯ್.ನಾಯ್ಕ, ಡಿ.ಜಿ.ಶೆಟ್ಟಿ, ಶಕುಂತಲಾ ಜೈವಂತ್, ಎನ್.ವಿ.ವೈದ್ಯ, ಗಾಯತ್ರಿ ನೇತ್ರೇಕರ್, ಗೀತಾ ಭೋವಿ, ಶಾಂತಿ ಅಗೇರ, ಜ್ಯೋತಿ ಗೌಡ, ಸಿ.ಆರ್.ನಾಯ್ಕ, ಸತೀಶ ನಾಯ್ಕ, ವಸಂತ ನಾಯ್ಕ, ಪ್ರಸನ್ನ ಶೆಟ್ಟಿ, ಜಬೀಯುಲ್ಲಾ ಖಾನ್, ಶೈಲೇಶ ಜೋಗಳೇಕರ್, ಎನ್.ವಿ.ನಾಯ್ಕ, ಅಣ್ಣಪ್ಪ ನಾಯ್ಕ, ಚಂದ್ರಕಾಂತ ರೇವಣಕರ್, ಶಾಂತಾರಾಂ ನಾಯ್ಕ, ನಾಗರಾಜ ನಾಯ್ಕ, ಶ್ರೀಧರ ನಾಯ್ಕ, ನಿಸಾರ್ ಆನವಟ್ಟಿ, ಖಲೀಲ್ ಗೌಡಳ್ಳಿ, ಜಗದೀಶ್ ನಾಯ್ಕ, ಗಿರಿಜಾ ನಾಯಕ, ರಮ್ಯಾ ಚಂದಾವರ, ರಜಿಯಾ ಬಾನು ಜೈಲರ್, ತಾರಾ ಮೇಸ್ತ, ಗೀತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.