ಅತ್ಯುತ್ತಮ ಪಾಠಶಾಲೆ ಪ್ರಶಸ್ತಿಗೆ ಭಾರತೀ ಸಂಸ್ಕೃತ ಪಾಠಶಾಲೆ ಆಯ್ಕೆ

ಶಿರಸಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ನಿರ್ದೇಶನಾಲಯ, ಬೆಂಗಳೂರು, ಸಂಸ್ಕೃತ ವಿದ್ಯಾವರ್ಧಿನಿ ಸಂಘ, ಭೈರುಂಬೆ ಇವರ ಆಳಿತಕ್ಕೆ ಒಳಪಟ್ಟ, ಶ್ರೀ ಭಾರತೀ ಸಂಸ್ಕೃತ ಪಾಠಶಾಲೆಯು 2017-18ನೇ ಸಾಲಿನ ಅತ್ಯುತ್ತಮ ಪಾಠಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇಲ್ಲಿ ಸಂಸ್ಕೃತ ಪ್ರಥಮಾ, ಕಾವ್ಯ, ಹಾಗೂ ವೇದ- ವೇದಮೂಲ ತರಗತಿಗಳು ನಡೆಯುತ್ತಿದ್ದು, ಜೂ.1 ರಿಂದ ಪ್ರವೇಶ ಆರಂಭ ಆಗಲಿದ್ದು, ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪಾಠಶಾಲೆ ಮುಖ್ಯಾಧ್ಯಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.