ಸ್ವರ್ಣವಲ್ಲೀಯಲ್ಲಿ ಸಾಂಸ್ಕೃತಿಕ ಸಂಭ್ರಮ


ಶಿರಸಿ: ಸ್ವರ್ಣವಲ್ಲೀ ಮಠದಲ್ಲಿ ನಡೆದ ನೃಸಿಂಹ ಹಾಗೂ ಕೃಷಿ ಜಯಂತಿ ಹಿನ್ನಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಸಕ್ತರ ಗಮನ ಸೆಳೆದವು.

ತಿಮ್ಮೇ ಗೌಡ, ನಾಗರಾಜ್ ಜೋಶಿ ಅವರಿಂದ ಜಾನಪದ ಕಲೆಯಾದ ಕೊಳಲಾಟ, ಸೋಂದಾ ವಾಜಗದ್ದೆಯ ವಿ.ಕೆ.ಹೆಗಡೆ ಅವರಿಂದ ಕನಸು ಕಂಡ ಕಂಸ ಯಕ್ಷಗಾನ ದೃಶ್ಯ ಚಿತ್ರಣ ಗಮನ ಸೆಳೆಯಿತು. ಯಕ್ಷ ಗೆಜ್ಜೆಯ ತಂಡದ ಕಲಾವಿದರಾದ ಅನಘ ಹೆಗಡೆ, ಅಭಿಜ್ಞಾ ಹೆಗಡೆ, ಗ್ರೀಷ್ಮಾ ಹೆಗಡೆ, ಭೂಮಿಕಾ ಹೆಗಡೆ ಕೃಷ್ಣರಾಗಿ, ವೆಂಕಟ್ರಮಣ ಹೆಗಡೆ ಪ್ರೇತನಾಗಿ ಸಹಕಾರ ನೀಡಿದರು. ಹಿಮ್ಮೇಳದಲ್ಲಿ ಸತೀಶ ದಂಟಕಲ್, ಶ್ರೀಪಾದ ಮೂಡಗಾರ, ವಿಘ್ನೇಶ್ವರ ಗೌಡ ಪಾಲ್ಗೊಂಡರು.

ಬೆಂಗಳೂರಿನ ವಸುದೇಂದ್ರ ವೈದ್ಯ ಭಕ್ತಿ ಸಂಗೀತ ಗಮನ ಸೆಳೆಯಿತು. ಪ್ರಕಾಶ ಹೆಗಡೆ ಯಡಹಳ್ಳಿ, ತಿರುಮಲೇಶ್ವರ ಭಟ್ಟ ಹುಳಗೋಳ ಸಹಕಾರ ನೀಡಿದರು. ಬಳಿಕ ಲಯನ್ಸ ಸಂಸ್ಥೆ ಮಾತೆಯರಿಂದ ಶಿವಾನಂದ ಕಳವೆ ಅವರ ಮಾತೆಯರ ಮಹಾತ್ಮೆ ನಾಟಕ ಪ್ರದರ್ಶನ ಕಂಡಿತು. ಪಿ.ನಾಗೇಶ ನಾಟಕ ನಿರ್ದೇಶಿಸಿದ್ದರು. ಸುರೇಶ ಹಕ್ಕಿಮನೆ ಸಂಗೀತ ನೀಡಿದ್ದರು.

ಯಕ್ಷ ಶಾಲ್ಮಲಾ ಸಂಯೋಜಿಸಿದ ಯಕ್ಷಗಾನ ಪ್ರದರ್ಶನವಾದ ಮಾಯಾ ಮೃಗಾವತಿ ಆಖ್ಯಾನದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ದಂಟಕಲ್, ನರಸಿಂಹ ಭಟ್ಟ, ಶರತ್ ಜಾನಕೈ, ವಿಘ್ನೇಶ್ವರ ಗೌಡ, ಮುಮ್ಮೇಳದಲ್ಲಿ ಭಾಸ್ಕರ ಗಾಂವಕರ್, ತಮ್ಮಣ್ಣ ಗಾಂವಕರ್, ನರೇಂದ್ರ ಅತ್ತಿಮುರಡು, ಮಂಜುನಾಥ ಮೂಲೆಮನೆ, ಶ್ರೀಧರ ಚಪ್ಪರ ಮನೆ, ಸದಾಶಿವ ಮಲವಳ್ಳಿ, ನಾಗರಾಜ ಕುಂಕಿಪಾಲ, ಪ್ರವೀಣ ತಟ್ಟಿಸರ, ವೆಂಕಟ್ರಮಣ ಕಡಬಾಳ, ಸದಾನಂದ ಪಟಗಾರ ಪಾಲ್ಗೊಂಡರು. ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ನಾಗರಾಜ್ ಜೋಶಿ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.