ಪಶು ವೈದ್ಯಾಧಿಕಾರಿ ಸಮ್ಮುಖದಲ್ಲೇ ಪ್ರಾಣ ಬಿಟ್ಟ ಕಡವೆ

ಕಾರವಾರ: ತೀವ್ರತರವಾಗಿ ಗಾಯಗೊಂಡಿದ್ದ ಸುಮಾರು ಐದು ವರ್ಷದ ಗಂಡು ಕಡವೆಗೆ ಅರಣ್ಯ ಇಲಾಖೆಯವರು ಚಿಕಿತ್ಸೆಗಾಗಿ ಪಶು ಚಿಕಿತ್ಸಾಲಯಕ್ಕೆ ತಂದಾಗ ಮೃತಪಟ್ಟ ಘಟನೆ ಕಾರವಾರದಲ್ಲಿ ಸಂಭವಿಸಿದೆ.

ಕಾರವಾರದ ಬಿಣಗಾದ ಆದಿತ್ಯ ಬಿರ್ಲಾ ಕಂಪೆನಿಯ ಆವರಣದೊಳಗಿನ ಗಿಡ ಗಂಟಿಗಳ ನಡುವೆ ಕಡವೆ ಕಾಲು ಮುರಿತಕ್ಕೊಳಗಾಗಿ ನಿತ್ರಾಣ ಸ್ಥಿತಿಯಲ್ಲಿತ್ತು. ಅಲ್ಲಿನ ಭದ್ರತಾ ಸಿಬ್ಬಂದಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು, ಆದಿತ್ಯ ಬಿರ್ಲಾದ ಭದ್ರತಾ ಸಿಬ್ಬಂದಿಗಳ ಸಹಾಯದಿಂದ ವಾಹನದಲ್ಲಿ ಚಿಕಿತ್ಸೆಗಾಗಿ ಪಶು ಚಿಕಿತ್ಸಾಲಯಕ್ಕೆ ಸಾಗಿಸಲಾಯಿತು. ಚಿಕಿತ್ಸೆಗೊಳಪಡುತ್ತಿದ್ದಂತೆ ಪಶು ವೈದ್ಯಾಧಿಕಾರಿ ಸಮ್ಮುಖದಲ್ಲೇ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕಾರವಾರ ವಲಯದ ಸೆಂಟ್ರಲ್ ನರ್ಸರಿ ಕಂಪೌಂಡ್ ಆವರಣದೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಕಡವೆಯ ಅಂತ್ಯ ಸಂಸ್ಕಾರ ಮಾಡಲಾಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.