ದಂಪತಿಗಳ ಮೇಲೆ ಬಿದ್ದ ಗೋಡೆಯ ಕಲ್ಲು: ಮಹಿಳೆ ಸಾವು, ಇನ್ನೊಬ್ಬ ಚಿಂತಾಜನಕ ಸ್ಥಿತಿ

ಕಾರವಾರ:ಶಾಲೆಯ ಹಳೆ ಗೋಡೆ ತೆರೆವು ಮಾಡುತ್ತಿದ್ದಾಗ ಸಂದರ್ಭದಲ್ಲಿ ಗೋಡೆ ಕಲ್ಲು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿದ್ದು ವ್ಯಕ್ತಿ ತೀವ್ರತರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸರಕಾರಿ ಪ್ರೌಢ ಶಾಲೆ ಬಳಿ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ದಂಪತಿ, ಸದ್ಯ ಕಾರವಾರ ನಗರದ ಸೋನಾರವಾಡಾ ನಿವಾಸಿ ರಾಮವ್ವ ಚಿತವಾಡಿಗ(36) ಘಟನೆಯಲ್ಲಿ ಮೃತಪಟ್ಟ ಮಹಿಳೆ. ಆಕೆಯ ಪತಿ ಯಮನೂರು ಬಸಪ್ಪ ಚಿತವಾಡಿ(40) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಕೂಲಿ ಕೆಲಸಕ್ಕಾಗಿ ಕಾರವಾರಕ್ಕೆ ದಂಪತಿಗಳಿಬ್ಬರು ಕಳೆದ ಕೆಲವು ತಿಂಗಳ ಹಿಂದೆ ತಮ್ಮಿಬ್ಬರು ಮಕ್ಕಳ ಜೊತೆಗೆ ಆಗಮಿಸಿದ್ದರು.

ನಗರದ ಸರಕಾರಿ ಪ್ರೌಢ ಶಾಲೆಯ ಹಿಂಭಾಗದಲ್ಲಿ ಶಾಲೆಯ ಹಳೆ ಗೋಡೆ ತೆರವು ಕಾಮಗಾರಿಯನ್ನು ಗುತ್ತಿಗೆದಾರ ರವಿ ಮಾಂಜ್ರೇಕರನ ಮೂಲಕ ದಂಪತಿಗಳು ಕೆಲಸ ಮಾಡಿಕೊಸಿಕೊಳ್ಳುತ್ತಿದ್ದರು. ತುಂಬಾ ಹಳೆ ಕಟ್ಟಡದ ಚಿರೆಕಲ್ಲು ತೆರವುಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಗೋಡೆ ಅವರಿಬ್ಬರ ಮೇಲೆ ಬಿದ್ದಿದೆ. ಇದರಿಂದಾಗಿ ರಾಮವ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯಿಂದ ಆಕೆಯ ಪತಿ ಯಮನೂರ ಬಸಪ್ಪ ಅವರಿಗೆ ಸೊಂಟ ಮುರಿದಿದೆ. ಪ್ರಥಮ ಚಿಕಿತ್ಸೆಯನ್ನು ಇಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ತೆಗೆ ಸಾಗಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.