ಕೈಗಾದ ಕೀರ್ತಿ ಭಾರತೀಯ ಮಹಿಳಾ ಅಂತರಾಷ್ಟ್ರೀಯ ರೋಲರ್ ಹಾಕಿ ತಂಡಕ್ಕೆ ಆಯ್ಕೆ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾ ಸ್ಕೇಟಿಂಗ್ ರೋಲರ್ ಕ್ಲಬ್‌ನಲ್ಲಿ ಸತತ 8 ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಕೀರ್ತಿ ಯಲ್ಲಪ್ಪ ಹುಕ್ಕೇರಿ ಕರ್ನಾಟಕದಿಂದ ಪ್ರಥಮ ಬಾರಿ ಭಾರತೀಯ ಮಹಿಳಾ ಅಂತರಾಷ್ಟ್ರೀಯ ರೋಲರ್ ಹಾಕಿ ತಂಡಕ್ಕೆ ಆಯ್ಕೆಯಾದ್ದಾಳೆ.

ಕೀರ್ತಿ ಯಲ್ಲಪ್ಪ ಹುಕ್ಕೇರಿ, ಸ್ಪೇನ್‌ನ ಬಾರ್ಸಿಲೋನದಲ್ಲಿ ನಡೆಯಲಿರುವ ವಿಶ್ವ ರೋಲರ್ ಹಾಕಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದಾಳೆ ಎಂದು ತರಬೇತುದಾರ ದಿಲೀಪ್ ಹಣಬರ್ ಮಾಹಿತಿ ನೀಡಿದರು. ಮಹಾರಾಷ್ಟ್ರದ ನಂದೂರಬಾರನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೈಗಾದ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದ ಮೂವರು ಪಾಲ್ಗೊಂಡಿದ್ದರು. ಅದರಲ್ಲಿ ಕೈಗಾ ಕೇಂದ್ರೀಯ ವಿದ್ಯಾಲಯದ ಕೀರ್ತಿ ಹುಕ್ಕೇರಿ ಆಯ್ಕೆಯಾಗಿದ್ದಾರೆ ಎಂದರು.

ಕೀರ್ತಿ, ಕೈಗಾ ಸ್ಕೇಟಿಂಗ್ ರೋಲರ್ ಕ್ಲಬ್‌ನಲ್ಲಿ ಸತತ 8 ವರ್ಷಗಳಿಂದ ತರಬೇತಿ ಪಡೆದಿದ್ದು ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದ ರೋಲರ್ ಹಾಕಿ ಸ್ಕೇಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಜೂನ್ 10 ರಿಂದ ಎರಡನೇ ಹಂತದ ತರಬೇತಿ ಚಂಡೀಗಢದಲ್ಲಿ ನಡೆಯಲಿದ್ದು, ಬಳಿಕ ಜೂನ್ 27 ರಿಂದ ಜುಲೈ 4 ರವರೆಗೆ ಸ್ಪೇನ್ನ ಬಾರ್ಸಿಲೋನಾದಲ್ಲಿ ಟ್ರೈನಿಂಗ್‌ ಪಡೆದು ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದಾಳೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.