ಮೇ.19ಕ್ಕೆ ಯೋಗ ಮಂದಿರದಲ್ಲಿ `ನೀನೇ ಕುಣಿಸುವೆ ಜೀವರನು’ ಕಾರ್ಯಕ್ರಮ

ಶಿರಸಿ: ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲೂಕಿನ ವಿವಿಧ ಸಂಘಟನೆಗಳಿಂದ ಅಗಲಿದ ಯಕ್ಷಗಾನದ ಮೇರು ಭಾಗವತ ನೆಬ್ಬೂರು ನಾರಾಯಣ ಭಾಗವತ ಅವರ ಸಂಸ್ಮರಣೆಯ `ನೀನೇ ಕುಣಿಸುವೆ ಜೀವರನು’ ನುಡಿ ನಮನ ಗಾನ, ಗಾನ ನಮನ ಕಾರ್ಯಕ್ರಮ ನಗರದ ಯೋಗ ಮಂದಿರದಲ್ಲಿ ಮೇ.19ರಂದು ಸಂಜೆ 4:30ಕ್ಕೆ ನಡೆಯಲಿದೆ.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್, ಸಾಗರದ ವಿದ್ವಾಂಸ ಜಿ.ಎಸ್.ಭಟ್ಟ, ವಿ.ಉಮಾಕಾಂತ ಭಟ್ಟ ಕೆರೇಕೈ, ಪ್ರಮೋದ ಹೆಗಡೆ ಯಲ್ಲಾಪುರ, ಆರ್.ಜಿ.ಭಟ್ಟ ವರ್ಗಾಸರ ನುಡಿ ನಮನ ಸಲ್ಲಿಸಲಿದ್ದು, ಗಾನ ನಮನದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಹೆಗಡೆ ಬ್ರಹ್ಮೂರು, ಶಂಕರ ಭಾಗವತ್ ಯಲ್ಲಾಪುರ, ಪ್ರಸನ್ನ ಹೆಗ್ಗಾರ ಪಾಲ್ಗೊಳ್ಳಲಿದ್ದಾರೆ.

ಯೋಗ ಮಂದಿರ, ಯಕ್ಷ ಶಾಲ್ಮಲಾ, ನೆಬ್ಬೂರು ಪ್ರತಿಷ್ಠಾನ, ವಿಶ್ವಶಾಂತಿ ಸೇವಾ ಟ್ರಸ್ಟ, ಹವ್ಯಕ ಕ್ಷೇಮಾಭಿವೃದ್ಧಿ ಟ್ರಸ್ಟ, ಸಂಕಲ್ಪ ಯಲ್ಲಾಪುರ, ಮಾತೃ ಮಂಡಳಿ ಸ್ವರ್ಣವಲ್ಲೀ, ಶಬರ ಸಂಸ್ಥೆ ಸೋಂದಾ, ಸಾಮ್ರಾಟ್ ಹೋಟೆಲ್, ಯಕ್ಷ ಸಂಭ್ರಮ, ನಾದ ಶಂಕರ, ಯಕ್ಷ ಭಾರತೀ, ಹೆಜ್ಜೆ ಗೆಜ್ಜೆ, ಅಂಕ ಸಂಸಾರ, ಯಕ್ಷ ಶುಭೋದಯ, ಗೆಳೆಯರ ಬಳಗ ಭೈರುಂಬೆ, ಯಕ್ಷಸಿರಿ ವಾನಳ್ಳಿ, ಯಕ್ಷ ಸಂಗಮ ಆದರ್ಶ ವನಿತಾ ಸಮಾಜ, ಯಕ್ಷ ಕಿರಣ ಕೋಳಿಗಾರ, ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ ಕಲಗದ್ದೆ, ಒಡ್ಡೋಲಗ, ಯಕ್ಷ ಚಂದನ ದಂಟ್ಕಲ್, ರಾಯಸಂ ಮಂಚಿಕೇರೆ ಇನ್ನಿತರ ಸಂಘಟನೆಗಳು ಸಹಕಾರ ನೀಡಿದ್ದು, ನೆಬ್ಬೂರು ಅಭಿಮಾನಿಗಳು ಪಾಲ್ಗೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.