ಬೈಕ್ ನಿಲ್ಲಿಸುವ ವಿಷಯಕ್ಕೆ ಜಗಳ: ವ್ಯಕ್ತಿ ಮೇಲೆ ಹಲ್ಲೆ

ಕುಮಟಾ: ಪಟ್ಟಣದ ಚೆನ್ನಮ್ಮ ಉದ್ಯಾನವನದ ಗೇಟಿನೆದುರು ಅಡ್ಡಲಾಗಿ ಇಟ್ಟಿದ್ದ ಬೈಕ್‍ನ್ನು ಸರಿಸುವಂತೆ ಹೇಳಿದ ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಬಿ.ಅಕ್ಕಿ ಅವರ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ ಕುರಿತು ಶುಕ್ರವಾರ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಅಳ್ವೇಕೋಡಿಯ ಹರಿಪ್ರಸಾದ ಸುಬ್ರಾಯ ನಾಯ್ಕ(26) ಹಲ್ಲೆ ಮಾಡಿದ ಆರೋಪಿ. ಹೆಗಡೆ ವೃತ್ತ ಬಳಿಯ ರಾಣಿ ಚೆನ್ನಮ್ಮ ಉದ್ಯಾನವನದ ಸಾರ್ವಜನಿಕರು ಓಡಾಡುವ ಗೇಟಿನ ಎದುರು ಅಡ್ಡಲಾಗಿ ಇಟ್ಟಿದ್ದ ಬೈಕ್(ಕೆಎ47,ವಿ 4118)ನ್ನು ಪಕ್ಕಕ್ಕೆ ಸರಿಸುವಂತೆ ವಿಚಾರಿಸಲು ಹೋದ ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಬಿ.ಅಕ್ಕಿಯವರ ಕೆನ್ನೆಗೆ ಹೊಡೆದ ಆರೋಪಿಯು, ಕರ್ತವ್ಯಕ್ಕೆ ಆತಂಕ ಪಡಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಐಪಿಸಿ ಕಲಂ 341, 353, 323ರನ್ವಯ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.