ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಕೇಂದ್ರ ಸಚಿವ ಅನಂತಕುಮಾರ: ಏನಿದರ ಅಸಲಿ ವಿಷ್ಯ ?

ಶಿರಸಿ: ಉತ್ತರ ಕನ್ನಡ ಲೋಕಸಭಾ ಅಬ್ಯರ್ಥಿ ಅನಂತಕುಮಾರ ಹೆಗಡೆ ಟ್ವಿಟ್ಟರ್ ಖಾತೆಯಿಂದ ಬುಧವಾರ ಹೊರಬಂದ ಟ್ವೀಟ್‌ಗಳು ಕೆಲವರಲ್ಲಿ ವಿವಾದ ಮೂಡಿಸಿದ್ದು, ಕೆಲವರಲ್ಲಿ ಚರ್ಚೆಗೆ ಕಾರಣವಾಗಿತ್ತು.

ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿದ ಸಚಿವರು ಬುಧವಾರ ರಾತ್ರಿ ಯಾರೋ ಹ್ಯಾಕರ್‌ಗಳು ನನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದಿದ್ದಾರೆ. ಗಾಂಧೀಜಿ ಸಾವಿನ ಘಟನೆಯ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಅವಶ್ಯಕತೆ ನನಗಿಲ್ಲ. ದೇಶಕ್ಕೆ ಮಾಡಿದ ಅವರ ಕೊಡುಗೆ ಬಗ್ಗೆ ದೇಶವೇ ಹೆಮ್ಮೆ ಪಡುತ್ತದೆ ಎಂದಿದ್ದಾರೆ.
ಈ ಹಿಂದೆಯೂ ಕಳೆದೆರಡು ಬಾರಿ ಹ್ಯಾಕ್ ಮಾಡಿ, ನನ್ನ ಖಾತೆಯಿಂದ ಸಂದೇಶಗಳನ್ನು ಕಳುಹಿಸಿ ನನಗೆ ವಂಚನೆ ಮಾಡಿದ್ದಾರೆ. ಪದೇ-ಪದೇ ಈ ರೀತಿ ನನ್ನ ಖಾತೆ ಬಹಿರಂಗವಾಗುತ್ತಿರುವುದಕ್ಕೆ ಕಾರಣ ತಿಳಿಯಬೇಕಿದೆ ಎಂದಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.