ಎಟಿಎಂ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಶಿರಸಿ: ಎರಡು ತಿಂಗಳ ಹಿಂದೆ ತಾಲೂಕಿನ ದಾಸನಕೊಪ್ಪದಲ್ಲಿ ಇಂಡಿಯನ್ ಒವರ್‌ಸೀಸ್ ಬ್ಯಾಂಕ್‌ನ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.

ಬದನಗೋಡಿನ ಸಂತೋಷ ಬೋವಿವಡ್ಡರ್ (21), ಇಟಗುಳಿ ಕಲಕೊಪ್ಪದ ಮುನ್ನಾಸಾಬ್ ದಾವುದ್‌ಸಾಬ್ (32) ಬಂಧಿತ ಆರೋಪಿಗಳು. ಸಿಪಿಐ ಬಿ. ಗಿರೀಶ ನೇತೃತ್ವದಲ್ಲಿ ತನಿಖಾಧಿಕಾರಿ ಚಂದ್ರಶೇಖರ ಹರಿಹರ ತನಿಖೆ ಕೈಗೊಂಡಿದ್ದರು. ಆರೋಪಿಗಳ ಪತ್ತೆಗೆ ಶ್ರಮಿಸಿದ ಬನವಾಸಿ ಠಾಣೆಯ ಸಿಬ್ಬಂದಿಯನ್ನು ಎಸ್ಪಿ ವಿನಾಯಕ ಪಾಟೀಲ ಪ್ರಶಂಸಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.