ಹೆಚ್ಚುತ್ತಿರುವ ಬಿಸಿಲ ಧಗೆ: ಎಲ್ಲೆಡೆ ಹೆಚ್ಚುತ್ತಿದೆ ನೀರಿಗೆ ಹಾಹಾಕಾರ

ಗೋಕರ್ಣ: ಪುರಾಣ ಪ್ರಸಿದ್ದ ಕ್ಷೇತ್ರ ಬೇಸಿಗೆ ಬಿಸಿಲಿಗೆ ನಲುಗುತ್ತಿದೆ. ತಾಪಮಾನ ದಿನೇ- ದಿನೇ ಹೆಚ್ಚುತ್ತಿದೆ. ನೀರಿನ ಹಾಹಾಕಾರ ಎಲ್ಲೆಡೆ ಆರಂಭವಾಗಿದೆ. ಜಲಮೂಲ ಬತ್ತಿ, ನೀರು ಪೂರೈಕೆ ನಿಂತಿದೆ.

ಪುರಾಣ ಪ್ರಸಿದ್ದ ಕೋಟಿತೀರ್ಥದಲ್ಲಿ ಸಹ ನೀರಿನ ಪ್ರಮಾಣ ಇಳಿದಿದ್ದು ಸುತ್ತಮುತ್ತಲಿನ ಮನೆಗಳ ಬಾವಿ ಬತ್ತಿದೆ. ಇನ್ನೂ ಹೇರಳವಾಗಿ ನೀರು ಲಭ್ಯವಿರುವ ಪ್ರದೇಶವಾದ ಗಂಜಿಗದ್ದೆ, ರಥಬೀದಿ, ಚಿನ್ನದಕೇರಿ ಭಾಗದಲ್ಲಿ ಈ ವರ್ಷ ನೀರಿನ ಪ್ರಮಾಣ ಇಳಿದಿದ್ದು, ಕೆಲವು ಮನೆಗಳ ಬಾವಿ ಬತ್ತಿವೆ. ಗ್ರಾಮ ಪಂಚಾಯತ ವ್ಯಾಪ್ತಿಯ ಒಟ್ಟು 10 ವಾರ್ಡಗಳಿದ್ದು ಅವುಗಳೆಲ್ಲವಕ್ಕೂ ಬೇರೆ ಬೇರೆ ನೀರಿನ ಮೂಲಗಳಿಂದ ಸಂಪರ್ಕ ಕಲ್ಪಿಸಲಾಗಿತ್ತು, ಆದರೆ ಸರಿಯಾದ ನಿರ್ವಹಣೆ ಇಲ್ಲದೆ ನೀರಿಗಾಗಿ ಪರಿದಾಡಬೇಕಾದ ಪರಿಸ್ಥಿತಿ ಪ್ರತಿ ವರ್ಷ ನಿರ್ಮಾಣವಾಗುತ್ತದೆ. ಕಳೆದೊಂದು ತಿಂಗಳ ಹಿಂದಿನವರೆಗೂ ಇಲ್ಲಿನ ಬಂಡಿಕೇರಿ ಬಾವಿಯಿಂದ ನೀರು ಪೂರೈಕೆಯಾಗುತ್ತಿತ್ತು, ಇದರ ಹತ್ತಿರವೇ ಹಾಲಕ್ಕಿ ಒಕ್ಕಲಿಗರ ಮನೆಗಳಿಗೆ ಹಾಗೂ ಶೃಂಗೇರಿ ಓಣಿಲ್ಲಿ ವಯೋವೃದ್ದರೆ ಹೆಚ್ಚು ವಾಸವಾಗಿರುವ ಮನೆಗಳಿಗೆ ನಳದ ಸಂಪರ್ಕ ನೀಡಿಲ್ಲ. ಕೆಲ ಮನೆಗಳಿಗೆ ದಶಕದ ಹಿಂದೆ ಹಾಕಿದ ನಳ ನಿರ್ವಹಣೆ ಇಲ್ಲಿದೆ ಹಾಗೆ ಉಳಿದಿ.

ಈ ವರ್ಷವಂತೂ ಜಲ ಮೂಲವೇ ಇಲ್ಲವಾಗಿರುವುದರಿಂದ ಸಮಸ್ಯೆ ಹಾಗೆ ಮುಂದುವರಿದಿದೆ. ಇದು ಪೇಟೆ ಭಾಗದ ಪರಿಸ್ಥಿತಿಯಾದರೆ. ಇನ್ನು ತಲಗೇರಿ, ಬಂಗ್ಲೆಗುಡ್ಡ, ನವಗ್ರಾಮ ಬಿಜ್ಜೂರು, ಆಲದಕೇರಿ ಕಡಿಮೆ ಬಿದ್ರಗೇರಿ ಭಾಗದಲ್ಲಿ ಸಹ ಇದೆ ಪರಿಸ್ಥಿತಿ, ಹೋಬಳಿ ವ್ಯಾಪ್ತಿಯ ಹಿರೇಗುತ್ತಿ, ಮಾದನಗೇರಿ, ತೊರ್ಕೆ, ಹನೇಹಳ್ಳಿ, ನಾಡುಮಾಸ್ಕೇರಿ ಸೇರಿದಂತೆ ಹಲವು ಹಳ್ಳಿಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಗಂಗಾವಳಿ ಜಲಮೂಲದಿಂದ ಕೊಂಚ ನೆಮ್ಮದಿ ತಂದಿದೆ. ಹೊಸ್ಕಟ್ಟಾ, ತೊರೆಗಜನಿ, ತೊರ್ಕೆಯ ಕೆಲವು ಗಜನಿ ಪ್ರದೇಶದಲ್ಲಿ ಜನವರಿ ತಿಂಗಳಿಂದಲೆ ಬಾವಿ ನೀರು ಉಪ್ಪಾಗಿ ಕುಡಿಯಲು ಸಾಧ್ಯವಾಗುವುದಿಲ್ಲ.

ಬಕಾಸುರ ಹೊಟ್ಟೆಗೆ ಅರೆಕಾಸಿನ ಮಚ್ಚಿಗಿಯಂತಾದ ನೀರು ಪೂರೈಕೆ: ಇಲ್ಲಿನ ಗ್ರಾಮ ಪಂಚಾಯದಿಂದ ಕಳೆದ ಎರಡು ವಾರದಿಂದ ನೀರು ಪೂರೈಕೆ ಮಾಡುತ್ತಿದ್ದು, ಕೋಟಿತೀರ್ಥ ಭಾಗದಲ್ಲಿ ಪ್ರತಿ ಮನೆಗೆ 6 ಕೂಡ ( ಬಿಂದಿಗೆ) ನೀರು ನೀಡುತ್ತದೆ. ಇದರಂತೆ ಉಳಿದ ಕಡೆ ಸಹ ವಿತರಿಸುತ್ತಿದ್ದು, ಇದು ಯಾವುದಕ್ಕೂ ಸಾಕಾಗುವುದಿಲ್ಲ ಹೆಚ್ಚಿನ ಪ್ರಮಾಣದಲ್ಲಿ ನೀರು ಒದಗಿಸಿ ಎಂದು ಗ್ರಾಮಸ್ಥರು ಹೇಳುತ್ತಾರೆ.

ದುಡ್ಡು ಕೊಟ್ಟರು ನೀರು ಸಿಗುವುದಿಲ್ಲಾ: ಎಲ್ಲಾ ಮನೆಗಳ ಮುಂದೆ ದೊಡ್ಡ ನೀರಿನ ಟ್ಯಾಂಕ್ ಇಟ್ಟಿರುವ ದೃಶ್ಯ ಕಾಣ ಸಿಗುತ್ತದೆ .ಪ್ರತಿ ಮನೆಯಲ್ಲೂ ನೀರನ್ನು ಹಣ ಕೊಟ್ಟು ತರಿಸುತ್ತಿದ್ದು, ದಿನದಿಂದ ಬೇಡಿಕೆ ಹೆಚ್ಚಿದ್ದು ,ನೀರಿನ ಅಭಾವಿದ್ದವರು ನೀರು ತರಿಸಲು ಹೇಳಿದರೆ ನಮಗೆ ಈಗ ಕೊಡುತ್ತಿರುವ ಮನೆಗಳಿಗೆ ಪೂರೈಸಲಾಗುತ್ತಿಲ್ಲ ಎನ್ನತ್ತಾರೆ.ಅಲ್ಲದೆ ನೀರು ಸರಬರಾಜು ಮಾಡುವವರ ಮನೆಗಳ ಬಾವಿ ನೀರು ಬತ್ತುವ ಹಂತಕ್ಕೆ ಬಂದಿದ್ದು, ಇನ್ನೂ ಒಂದು ವಾರದಲ್ಲಿ ಮಳೆ ಬರದಿದ್ದರೆ ಹಣ ಕೊಟ್ಟರು ನೀರು ಸಿಗದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.