ಸ್ವರ್ಣವಲ್ಲೀಯಲ್ಲಿ ಮೇ.17ಕ್ಕೆ ‘ಮಾಯಾ ಮೃಗಾವತಿ’ ಯಕ್ಷಗಾನ ಪ್ರದರ್ಶನ

ಶಿರಸಿ: ಶ್ರೀಮಜ್ಜಗದ್ಗುರು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯಲಿರುವ ಲಕ್ಷ್ಮೀನೃಸಿಂಹ ರಥೋತ್ಸವದ ಅಂಗವಾಗಿ ಯಕ್ಷಶಾಲ್ಮಲಾ ಸ್ವರ್ಣವಲ್ಲೀ ಇವರಿಂದ ‘ಮಾಯಾ ಮೃಗಾವತಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಮೇ.17 ರಂದು ಮಹಾಸಂಸ್ಥಾನದ ರಥಬೀದಿಯಲ್ಲಿ ರಾತ್ರಿ 12.30 ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ಮದ್ದಲೆಯಲ್ಲಿ ನರಸಿಂಹ ಭಟ್ಟ ಹಂಡ್ರಮನೆ, ಶರತ್ ಜಾನಕೈ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ ಇರುವರು. ಮುಮ್ಮೇಳದಲ್ಲಿ ಭಾಸ್ಕರ್ ಗಾಂವ್ಕಾರ್, ತಮ್ಮಣ್ಣ ಗಾಂವ್ಕಾರ್, ನರೇಂದ್ರ ಹೆಗಡೆ, ಮಂಜುನಾಥ ಗಾಂವ್ಕಾರ್, ಶ್ರೀಧರ ಹೆಗಡೆ ಚಪ್ಪರಮನೆ, ಸದಾಶಿವ ಮಲವಳ್ಳಿ, ನಾಗರಾಜ ಕುಂಕಿಪಾಲ್, ಪ್ರವೀಣ ತಟ್ಟೀಸರ, ವೆಂಕಟ್ರಮಣ ಕಡಬಾಳ, ಸದಾನಂದ ಪಟ್ಟಗಾರ ಪಾತ್ರ ನಿರ್ವಹಿಸುವರು. ನಾಗರಾಜ ಜೋಶಿ ಸಂಯೋಜನೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲ ಯಕ್ಷಾಭಿಮಾನಿಗಳನ್ನು ಸಂಘಟಕರು ಪ್ರಕಟಣೆಯ ಮೂಲಕ ಆಮಂತ್ರಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.