ಸ್ಥಳೀಯ ಸಂಸ್ಥೆ ಚುನಾವಣೆ: ಮದ್ಯದಂಗಡಿ ಬಂದ್‍ಗೆ ಜಿಲ್ಲಾಧಿಕಾರಿ ಆದೇಶ

ಕಾರವಾರ: ಜಿಲ್ಲೆಯ ಭಟ್ಕಳ ಪುರಸಭೆ, ಹೊನ್ನಾವರ ಪಟ್ಟಣ ಪಂಚಾಯತ್ ಮತ್ತು ಸಿದ್ದಾಪುರ ಪಟ್ಟಣ ಪಂಚಾಯತ್ ಸ್ಥಳಿಯ ಸಂಸ್ಥೆಗಳಿಗೆ ಮೇ 29 ರಂದು ಚುನಾವಣೆ ಹಾಗೂ 31 ರಂದು ಮತ ಎಣಿಕೆ ನಡೆಯಲಿರುವುದರಿಂದ, ಮೇ 28 ರಂದು ಮುಂಜಾನೆ 7 ಗಂಟೆಯಿಂದ ಮೇ 29 ರ ಮಧ್ಯ ರಾತ್ರಿರವರೆಗೆ ಆಯಾ ನಗರ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವೈನ್ ಶಾಪ್/ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಸದರಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ ಎಂದು ಅವರು ಘೋಷಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.