ಸುವಿಚಾರ

ಶ್ರುತ್ವಾ ಧರ್ಮಂ ವಿಜಾನಾತಿ ಶ್ರುತ್ವಾ ತ್ಯಜತಿ ದುರ್ಮತಿಮ್
ಶ್ರುತ್ವಾ ಜ್ಞಾನಮವಾಪ್ನೋತಿ ಶ್ರುತ್ವಾ ಮೋಕ್ಷಂ ಚ ವಿಂದತಿ ||

ಕೇಳಿ ತಿಳಿದು ಧರ್ಮವನ್ನು ಆಚರಿಸಬಹುದಾಗಿದೆ, ಕೇಳಿ ತಿಳಿದಮೇಲೆ ದುಷ್ಟ ಚಿಂತನೆಗಳನ್ನು ತೊರೆಯಬಹುದಾಗಿದೆ, ಕೇಳಿ ತಿಳಿದು ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಕೇಳಿ ತಿಳಿದು ಮೋಕ್ಷವನ್ನೇ ಸಾಧಿಸಬಹುದಾಗಿದೆ. ಅದೇನದು ಅಂಥಾ ಮಹತ್ತ್ವದ ಕೇಳುವಿಕೆ? ಅನ್ನುವ ಪ್ರಶ್ನೆ ಬರಬಹುದು. ಇಲ್ಲಿನ ಕೇಳುವಿಕೆಯು ಸಾಮಾನ್ಯವಾದ ಕೇಳುವಿಕೆಯಲ್ಲ. ಶ್ರುತಿ ಎಂಬ ಸಂಸ್ಕೃತ ಪದಕ್ಕೆ ವೇದ ಎನ್ನುವ ಅರ್ಥ ಇದೆ. ಕೇಳಬೇಕಾದ್ದು ವೇದದ ಮಂತ್ರಗಳನ್ನೇ. ಯಾಕೆಂದರೆ ಶ್ರುತಿಯು ಯಥಾರ್ಥವನ್ನೇ ಹೇಳುವ ಆಪ್ತೆ. ಅಂಥಾ ಶ್ರುತಿಯನ್ನು ಕೇಳಿಸಿಕೊಂಡಮೇಲೆ ಅರಿವು ಮತ್ತು ಮೋಕ್ಷಗಳು ಸಾಧ್ಯ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.