ಮೇ.20ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ: ನಗರದ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ಮೇ.20 ಸೋಮವಾರ  ತುರ್ತು ನಿರ್ವಹಣೆ ಕಾರ್ಯವನ್ನು ಹಾಗೂ ವಿವಿಧ ಮಾರ್ಗಗಳ ಲಿಂಕ್ ಲೈನ್ ಹಾಗೂ ತಂತಿ ಬದಲಾವಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ಕಾರಣ ಶಿರಸಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮತ್ತು ಗ್ರಾಮೀಣ ಮಾರ್ಗಗಳಾದ ಶಿರಸಿ ನಗರ-1, ಶಿರಸಿ ನಗರ-2, ಕಸ್ತೂರಬಾನಗರ, ಕೆಂಗ್ರೆ, ಮಾರಿಗದ್ದೆ, ತಾರಗೋಡ, ಚಿಪಿಗಿ, ಸಾಲ್ಕಣಿ, ಸಂಪಖಂಡ, ದೇವನಳ್ಳಿ, ಹುಲೇಕಲ್ ಮತ್ತು ಬನವಾಸಿ 11 ಕೆ.ವಿ ಮಾರ್ಗಗಳಲ್ಲಿ ಸೋಮವಾರ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.