ಮೇ.17ಕ್ಕೆ ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

ಶಿರಸಿ: ನಗರದ ಎಂ.ಇ.ಎಸ್ ಐಟಿಐ ಕಾಲೇಜಿನಲ್ಲಿ ಮೇ.17 ರಂದು ಬೆಳಿಗ್ಗೆ 10 ಗಂಟೆಯಿಂದ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

ನೀಮ್ ಯೋಜನೆಯಡಿ ಎನ್.ಟಿ.ಟಿ.ಎಫ್ ಇಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಇವರು ’ಡಿಪ್ಲೋಮಾ ಇನ್ ಮೆನುಫ್ಯಾಕ್ಚರಿಂಗ್ ಟಿಕ್ನೋಲಜಿ’ ಕುರಿತು ಇಂಡೋ ಎಮ್.ಎಮ್. ಟೆಕ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಎಸ್‌ಎಸ್ ಎಲ್‌ಸಿ, ಪಿಯುಸಿ, ಐಟಿಐ ಪಾಸಾದ ಹಾಗೂ ಅಂತಿಮ ವರ್ಷದದಲ್ಲಿ ಫಿಟ್ಟರ್, ಟರ್ನರ್, ಗ್ರೈಂಡರ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅರ್ಹ ಅಬ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ದಾಖಲಾತಿಗಳ ಪ್ರತಿ, ಪಾಸ್‌ಪೋರ್ಟ್ ಅಳತೆಯ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9008048202, 9481112002 ಸಂಪರ್ಕಿಸುವಂತೆ ಕಾಲೇಜು ಪ್ರಾಚಾರ್ಯ ಗಣೀಶ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.