ಬಿ.ಎಫ್.ಬೆಂಡಿಗೇರಿಯವರಿಗೆ ಹಳೆಯ ಕಾಂಗ್ರೆಸ್ಸಿಗರಿಂದ ಶೃದ್ಧಾಂಜಲಿ


ಕಾರವಾರ: ಇತ್ತೀಚೆಗೆ ನಿಧನರಾದ ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತರು ಹಾಗೂ ತಾಮೀರ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದ ಮುಂಡಗೋಡಿನ ಬಿ.ಎಫ್.ಬೆಂಡಿಗೇರಿಯವರಿಗೆ ಎಲ್ಲಾ ಹಿರಿಯ ಕಾಂಗ್ರೆಸ್ಸಿನ ಸದಸ್ಯರು ಹಾಗೂ ತಾಮೀರ ಕೋ ಆಪ್ರೇಟಿವ್ ಕ್ರೆಡಿಟ್ ಸೊಸೈಟಿಯವರು ಶೃದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಗೌರವವನ್ನು ಸೂಚಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಕೆ.ಟಿ.ತಾಡೇಲ್ ಮಾತನಾಡಿ ಬೆಂಡಿಗೇರಿಯವರು ಕಾಗ್ರೆಸ್ಸಿನ ಜೀವಾಳದಂತೆ ಇದ್ದರು. ಅವರ ನಿಧನದಿಂದ ಉತ್ತರ ಕನ್ನಡ ಕಾಂಗ್ರೆಸ್ಸು ಉತ್ತಮ ಕಾರ್ಯಕರ್ತರನ್ನು ಕಳೆದು ಕೊಂಡಂತಾಗಿದೆ. ಅವರು ಕಾಗ್ರೆಸ್ ಪಕ್ಷದ ಏಳಿಗೆಗಾಗಿ ದುಡಿದು ಅದನ್ನು ಮುಂದುವರೆಸಿಕೊಂಡು ಹೋಗಿದ್ದರು. ಇಂದಿನ ಪೀಳಿಗೆಯ ಎಲ್ಲಾ ಕಾಗ್ರೆಸ್ಸಿನವರಿಗೂ ಅವರು ಆತ್ಮೀಯರಾಗಿದ್ದರು. ಅಜಾತ ಶತ್ರುವಿನಂತಿದ್ದ, ಜಾತ್ಯಾತೀತರಾಗಿದ್ದ ಬೇಡಿಗೇರಿಯವರ ಸಾವಿನಿಂದ ಉತ್ತರ ಕನ್ನಡದ ಕಾಗ್ರೆಸ್ ಪಕ್ಷಕ್ಕೆ ತುಂಬ ಲಾರದ ನಷ್ಟ್‍ವಾಗಿದೆ. ದೇವರು ಅವರ ಕುಟುಂಬಕ್ಕೆ ಶಾಂತಿ,ನೆಮ್ಮದಿ ಹಾಗೂ ಸದ್ಗತಿಯನ್ನು ಕೊಡಲಿ ಎಂದು ಹೇಳಿದರು.

ಇನ್ನೋರ್ವ ಹಿರಿಯ ಸದಸ್ಯರೂ ಹಾಗೂ ನಗರ ಸಭೆಯ ಮಾಜಿ ಅಧ್ಯಕ್ಷರೂ ಆದ ಎಮ್.ಇ.ಶೇಖ್ ಮಾತನಾಡಿ ಬೆಂಡಿಗೇರಿಯವರು ಕಾಂಗ್ರೆಸ್ಸಿನ ಬಹಳ ಹಳೆಯ ಕಾರ್ಯಕರ್ತರಾಗಿದ್ದರು. ಪಕ್ಷವನ್ನು ಕಟ್ಟಲು ಬಹಳ ಶೃದ್ಧೆಯಿಂದ ಕಾರ್ಯವನ್ನು ಮಾಡಿದ್ದವರು. ತಾಮೀರ್ ಬ್ಯಾಂಕನ್ನು ಸಹ ಪ್ರಾರಂಬಿಸಿ ಅದರ ಯಶಸ್ಸಿಗೆ ಕಾರಣ ರಾದವರಾಗಿದ್ದರು. ಅವರ ನಿಧನದಿಂದ ಪಕ್ಷಕ್ಕೆ ಅಪಾರವಾದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು. ಭಾರತ್ ಸ್ಕೂಲ್‍ನ ಪ್ರಾಂಶುಪಾಲರಾದ ಮೊಹಮ್ಮದ್ ಖಲೀಲುಲ್ಲಾ ಮಾತನಾಡಿ ಬೆಂಡಿಗೇರಿಯವರು ಎಲ್ಲಾ ಜನರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಜಾತಿ ಭೇದ ಭಾವ ಮರೆತು ಹೋರಾಡುತ್ತಿದ್ದವರಾಗಿದ್ದರು. ಅವರಿಗೆ ಹಿಂದಿನ ವಿದ್ವಾಂಸರು“ರಯೀಸೆ ಆಝಮ್”ಎಂಬ ಪದವಿಯನ್ನು ನೀಡಿ ಗೌರವಿಸಿದ್ದಾರೆ ಎಂದು ಹೇಳಿ ಅವರ ಕಾರ್ಯಗಳನ್ನು ಸ್ಮರಿಸಿದರು.

ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಇಬ್ರಾಹಿಂ ಕಲ್ಲೂರ್ ಮಾತನಾಡಿ ಜನರು ಅವರನ್ನು ಎಷ್ಟು ಮೆಚ್ಚುತ್ತಿದ್ದರೆಂಬುದನ್ನು ಅವರ ಮರಣದ ದಿನದಂದು ಸೇರಿದ್ದ ಜನಸ್ತೋಮವನ್ನು ನೋಡಿಯೇ ತಿಳಿಯುತ್ತಿತ್ತು. ಅವರೊಬ್ಬ ಅದ್ಭುತ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಪ್ರಾರಂಭದಲ್ಲಿ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್ ಎಲ್ಲರನ್ನು ಸ್ವಾಗತಿಸಿ ಬೆಂಡಿಗೇರಿಯವರ ಜೀವನ ವೃತ್ತಾಂತದ ಕುರಿತು ತಿಳಿಸಿದರು.

ತಾಮೀರ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಮೊಹಮ್ಮದ್ ಕಲೀಂ ಶೇಖ್ ವಂದಿಸಿದರು. ಈ ಸಂದರ್ಭದಲ್ಲಿ ತೌಹೀದ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಇಂತಿಯಾಜ್ ಬುಖಾರಿ, ಲಯನ್ಸ್ ಕ್ಲಬ್‍ನ ಮಾಜಿ ಅದ್ಯಕ್ಷ ಅಲ್ತಾಫ್ ಶೇಖ್, ತಾಮೀರ್ ಬ್ಯಾಂಕ್‍ನ ನಿರ್ದೇಶಕ ಮೊಹಮ್ಮದ್ ಸಾಧಿಕ್ ಖಾನ್, ತಾಮೀರ್ ಬ್ಯಾಂಕ್‍ನ ಕಾರವಾರದ ವ್ಯವಸ್ಥಾಪಕ ಅಮೀರ್ ಸಾಬ್ ಶೇಖ್, ಕುಮಟಾದ ವ್ಯವಸ್ಥಾಪಕ ಅಮೀರ್ ಅಲಿ ಸಯ್ಯದ್, ನಾಸಿರ್ ಶೇಖ್, ಅಕ್ತರ್ ಸಯ್ಯದ್ ಮತ್ತು ಬ್ಯಾಂಕ್‍ನ ಸಿಬ್ಬಂದಿಗಳು ಉಪಸ್ಥಿತರಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.