ನೆಬ್ಬೂರರು ಪ್ರತಿಭಾವಂತ ನಾಯಕರಾಗಿದ್ದರು: ಎಮ್.ಕೆ.ಭಾಸ್ಕರ್‍ ರಾವ್


ಶಿರಸಿ: ನಗರದ ಸಾಮ್ರಾಟ ವಿನಾಯಕ ಹಾಲ್ ಸಭಾಭವನದಲ್ಲಿ ಗುರುವಾರ ನೆಬ್ಬೂರು ಭಾಗವತರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಮಾಲಾರ್ಪಣೆ ಮಾಡಿ ದಿವಂಗತರ ಆತ್ಮಕ್ಕೆ ಶಾಂತಿ ಕೋರಿ, ಶೃದ್ದಾಂಜಲಿ ಸಲ್ಲಿಸಲಾಯಿತು.

ಎಮ್.ಕೆ.ಭಾಸ್ಕರ್‍ ರಾವ್ ಶೃದ್ಧಾಂಜಲಿ ಅರ್ಪಿಸಿ ಮಾತನಾಡಿ ನೆಬ್ಬೂರರು ನಮ್ಮ ಜಿಲ್ಲೆಯ ಪ್ರತಿಭಾವಂತ ಭಾಗವತರು. ಅವರು ಇಷ್ಟು ಬೇಗ ಸ್ವರ್ಗಸ್ಥರಾಗುತ್ತಾರೆ ಎಂದು ಯಾರೂ ತಿಳಿದಿರಲಿಲ್ಲ. ಅವರೊಬ್ಬ ಅಪರೂಪದ ವ್ಯಕ್ತಿಯಾಗಿದ್ದರು. ಕೆರೆಮನೆ ಮೇಳ ಮತ್ತು ನೆಬ್ಬೂರರ ಸಂಬಂಧ ಅತ್ಯಂತ ನಿಕಟವಾದುದು ಎಂದು ಹೇಳಿ, ಅವರ ನೆನೆಪು ಸದಾ ಇರುವಂತೆ ಕಾರ್ಯ ಆಗಬೇಕೆಂದು ಆಶಿಸಿದರು.

ಯಕ್ಷಗಾನ ಪ್ರೇಮಿ ಹಿರಿಯ ಸಹಕಾರಿಗಳಾದ ಎನ್. ಪಿ. ಗಾಂವ್ಕರ್ ನೆಬ್ಬೂರರ ಕುರಿತು ಮಾತನಾಡಿ ಇವರು ನಮ್ಮ ಜಿಲ್ಲೆಯವರಾಗಿ ಯಕ್ಷಗಾನದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದರು. ಅವರ ಒಡನಾಟ ನನ್ನ ಜೀವನದಲ್ಲಿ ಸದಾನೆನಪಿನಲ್ಲಿರುವಂಥದ್ದು ಎಂದು ಸ್ಮರಿಸಿದರು. ಸದಾ ಅವರ ಹೆಸರು ನೆನಪಿನಲ್ಲಿರುವ ಕಾರ್ಯವಾಗಬೇಕು. ಅದಕ್ಕೆ ನನ್ನಿಂದ ಯಾವತ್ತೂ ಸಹಕಾರವಿದೆ ಎಂದು ಹೇಳಿದರು.

ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಷಿಯವರು ಮಾತನಾಡಿ ನೆಬ್ಬೂರ ಭಾಗವತರು ಇಡಗುಂಜಿ ಮಹಾಗಣಪತಿಗೆ ಹೂವನ್ನು ಅರ್ಪಿಸಿ ಸಾವನ್ನಪ್ಪಿದ್ದಾರೆಂಬುದನ್ದನು ಕೇಳಿ, ಇದು ಅಪರೂಪದ ಸಾವು ಎಂಬುದನ್ನು ನೆನೆದಾಗ ಅವರು ನಡೆಸಿದ ಜೀವನದ ಕುರಿತು ಹೆಮ್ಮೆಯಾಗುತ್ತದೆ. ಸದಾ ಎಲ್ಲರೊಂದಿಗೆ ಬೆರೆತು ತಾನೊಬ್ಬ ಹಿರಿಯ ಭಾಗವತ ಎಂಬ ಭಾವ ತೋರ್ಪಡಿಸದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವಿಸಿದ ನಾರಾಯಣಭಾಗವತರು ನಮಗೆಲ್ಲ ಆದರ್ಶರಾಗುತ್ತಾರೆಂದು ಹೇಳಿ ಅವರ ಕುರಿತು ಅಕಾಡೆಮಿ ಮಾಡಿದ ಕೆಲಸ ವಿವರಿಸಿದರು. ಅಶೋಕ ಹಾಸ್ಯಾಗಾರರು ಮಾತನಾಡಿ ತುಡುಗುಣಿ ತಾಳಮದ್ದಲೆ ಕುರಿತು ಬರೆಯುವಾಗಿನ ಭಾಗವತೊಡನರಯ ಒಡನಾಟ ಸ್ಮರಿಸಿ ಅವರ ಯೋಗ್ಯತೆಗೆ ತಕ್ಕುದಾದ ಇನ್ನೂ ಮಹತ್ತರ ಪುರಸ್ಕಾರಗಳು ಸಿಗಬೇಕಾಗಿತ್ತು ಎಂದು ಆಶಿಸಿದರು.

ಸಂಘಟಕರಾದ ಎಸ್.ಕೆ. ಭಾಗ್ವತ್ ಶಿರಸಿಮಕ್ಕಿ ಪ್ರಾಸ್ಥಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿ, ಸಂಘಟನೆ ಜೊತೆಯಾಗಿದ್ದ ಸತೀಶ ಹೆಗಡೆ ಹೊಟೇಲ್ ಸಾಮ್ರಾಟ, ಮಹಾಬಲೇಶ್ವರ ಭಟ್ಟ ತುಡಗುಣಿ ಇವರ ಸಹಕಾರ ಸ್ಮರಿಸಿ ಎಲ್ಲರಿಗೂ ವಂದನರ್ಪಣೆ ಸಲ್ಲಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.