ಯಕ್ಷಗಾನ ಸಂಶೋಧಕ ಡಾ ಜಿ ಎಲ್ ಹೆಗಡೆಗೆ ಕೆರೆಕೈ ಪ್ರಶಸ್ತಿ ಪ್ರದಾನ

ಕುಮಟಾ: ಪಟ್ಟಣದ ಹೆರವಟ್ಟಾದ ಬಿ.ಎಲ್.ಹೆಗಡೆಯವರ ಮನೆಯಲ್ಲಿ ಕರ್ಕಿ ಭಾಸ್ಕರ ಮಾಸ್ತರ್ ಪುಣ್ಯ ಸ್ಮರಣೆ ನಿಮಿತ್ತ ಕೈರೆಕೈ ಕೃಷ್ಣ ಭಟ್ಟರ ಸಂಶೋಧನಾ ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಬಾಳಿಗಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಯಕ್ಷಗಾನ ಸಂಶೋಧಕ ಡಾ. ಜಿ. ಎಲ್.ಹೆಗಡೆಯವರಿಗೆ ಕೈರೆಕೈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತರಾದ ಡಾ. ಜಿ.ಎಲ್.ಹೆಗಡೆ ಮಾತನಾಡಿ ಯಕ್ಷಗಾನ ಆರಾಧನಾ ಕಲೆ, ಇದನ್ನು ನಮ್ಮ ಪರಂಪರೆ ಒಪ್ಪಿಕೊಂಡು ಸಾಸಿಕೊಂಡು ಬಂದಿದೆ ಎಂದರು.

ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ದಿ. ಭಾಸ್ಕರ ಮಾಸ್ತರ ಬದುಕಿನ ಬಗ್ಗೆ ವಿವರಿಸಿದರು. ಡಾ. ಜಿ.ಎಲ್.ಹೆಗಡೆಯವರ ಸಾಧನೆಗಳನ್ನು ಕೊಂಡಾಡಿದರು. ಸೆಲ್ಕೋ ಸೋಲಾರದ ಸಹಾಯಕ ಪ್ರಧಾನ ವ್ಯವಸ್ಥಾಪಕ ಸುರೇಶ ಸಾವಳಗಿ, ಕೃಷಿ ತಜ್ಞ ಶಿವಾನಂದ ಕಳವೆ, ಅಧ್ಯಕ್ಷತೆ ವಹಿಸಿದ್ದ ಆರ್.ಎನ್.ಹೆಗಡೆ ಹೊರ್ಸಗದ್ದೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಾರ್ವತಿ ಭಾಸ್ಕರ ಹೆಗಡೆ, ಶ್ರೀಕಾಂತ ಭಾಸ್ಕರ ಹೆಗಡೆ, ಪ್ರಭಾ ಭಟ್ಟ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮೋಹನ ಹೆಗಡೆ ನಿರ್ವಹಿಸಿದರು.

ನಂತರ ‘ಭಕ್ತ ಸುಧನ್ವ’ ತಾಳಮದ್ದಲೆ ನಡೆಯಿತು. ಜೋಗಿಮನೆ ಗೋಪಾಲಕೃಷ್ಣ ಭಟ್, ಅನಂತ ಪದ್ಮನಾಭ ಪಾಠಕ, ಪಿ.ಕೆ.ಹೆಗಡೆ ಹರಿಕೇರಿ, ದತ್ತಾರಾಮ ಅಂತ್ರವಳ್ಳಿ, ಡಾ. ಜಿ.ಎಲ್.ಹೆಗಡೆ, ವಿದ್ವಾನ್ ಉಮಾಕಾಂತ ಭಟ್, ಡಾ. ಜಿ.ಕೆ.ಹೆಗಡೆ ಹರಿಕೇರಿ, ಮೋಹನ ಭಾಸ್ಕರ ಹೆಗಡೆ ಭಾಗವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.