ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ವಶಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಗೋಡೌನ್ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಮದ್ಯ ಹಾಗೂ ವಾಹನವನ್ನುಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಆಧಾರದಲ್ಲಿ ಬುಧವಾರ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಗೋಡೌನ್ನಲ್ಲಿದ್ದ 2.19 ಲಕ್ಷ ರೂ. ಮೌಲ್ಯದ ಒಟ್ಟು 833.10 ಲೀ. ಅಕ್ರಮ ಮದ್ಯ ಹಾಗೂಒಟ್ಟು 9 ಲಕ್ಷ ರೂ, ಮೌಲ್ಯದ ಎರಡು ಸರಕು ಸಾಗಣೆ ವಾಹನವನ್ನು ಸಹ ಅಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ದೀಪಕ್ ನಾಯಕ ಹಾಗೂ ಸುರೇಶ ಪಟಗಾರ ಎಂಬುವವರು ತಲೆ ಮರೆಸಿಕೊಂಡಿದ್ದು ಅವರ ಬಂಧನನಕ್ಕೆ ಅಕಾರಿಗಳು ಬಲೆ ಬೀಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.