ಮೇ. 26ಕ್ಕೆ ವಿನಾಯಕ ಬ್ರಹ್ಮೂರು ನಿರ್ದೇಶನದ ‘ಆಚೆ’ ಚಿತ್ರ ಬಿಡುಗಡೆಗೆ ಸಿದ್ಧ


ಕುಮಟಾ: ಬ್ರಹ್ಮ ಕ್ರಿಯೇಶನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ವಿನಾಯಕ ಬ್ರಹ್ಮೂರು ನಿರ್ದೇಶನದ 6ನೇ ಚಿತ್ರ ‘ಆಚೆ’ಯ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಬಹುದಿನಗಳ ಕುತೂಹಲಕ್ಕೆ ತೆರೆ ಬೀಳಲಿದ್ದು ಮೇ.26ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ವಿನಾಯಕ ಬ್ರಹ್ಮೂರು ಮಾಹಿತಿ ನೀಡಿದ್ದಾರೆ.

ಸೈಕಾಲಾಜಿಕಲ್ ಕಥಾವಸ್ತುವನ್ನು ಹೊಂದಿರುವ ಚಿತ್ರದಲ್ಲಿ ರಂಗಭೂಮಿ ಸ್ಟಾರ್ ನಟರಾದ ದಯಾನಂದ ಬಿಳಗಿ ಹಾಗೂ ಹರ್ಷ ಹಿರಿಯೂರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಬೆಡಗಿ ತೇಜು ನಾಯ್ಕ ನಾಯಕಿಯಾಗಿ ಚಿತ್ರಕ್ಕೆ ಹೊಳಪನ್ನು ನೀಡಿದ್ದಾರೆ. ಚಿಂತಕರಾದ ಜಯದೇವ ಬಳಗಂಡಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸ್ನೇಹಜೀವಿ ನಾಗರಾಜ ಹೆಗಡೆ ಕಡ್ಲೆಪುರಿಯ ಪಾತ್ರದಲ್ಲಿ ಮೆರುಗು ನೀಡಿದ್ದಾರೆ.

ಸುನೀಲ ಹೆಗಡೆ ತಟ್ಟೀಸರ ಅವರ ಸಿನಿಮಾಟೋಗ್ರಫಿ ಹಾಗೂ ಗುರುಪ್ರಸಾದ ಕಾಶಿ ಅವರ ಸಂಕಲನ ಗಮನ ಸೆಳೆಯಲಿದೆ. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ವಿನಾಯಕ ಬ್ರಹ್ಮೂರು ಅವರದ್ದಾಗಿದೆ. ಶಿವಾನಂದ ಹೆಗಡೆ ಕಡತೋಕಾ, ನಾಗೇಶ ಭಟ್ಟ, ಶ್ರೀನಿವಾಸ ಹೆಬ್ಬಾರ, ರಾಜಗೋಪಾಲ ಅಡಿ, ಜಿಎನ್ ಗೌಡ, ಜಿ.ಜಿ. ಶಂಕರ್, ರಾಜೇಶ ಆಚಾರ್ಯ ಚಂದಾವರ ಮುಂತಾದ ಗಣ್ಯರು ಚಿತ್ರಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಆಚೆ ಟ್ಯಾಲೆಂಟ್ ಹಂಟ್ ಅವಾರ್ಡ್‍ನ ಫಲಿತಾಂಶ: ಆಚೆ ಚಿತ್ರತಂಡದಿಂದ ವಿಭಿನ್ನ ಪ್ರಯೋಗವೆಂಬಂತೆ “ಆಚೆ ಟ್ಯಾಲೆಂಟ್ ಹಂಟ್ ಅವಾರ್ಡ್” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಚೆ ಕಥಾ ಸ್ಪರ್ಧೆ, ಆಚೆ ಮೊಬೈಲ್ ಫೋಟೋಗ್ರಫಿ ಅವಾರ್ಡ್, ಆಚೆ ಬೆಸ್ಟ್ ಸಿಂಗರ್ ಅವಾರ್ಡ್, ಆಚೆ ಕ್ಯೂಟ್ ಕಪಲ್ಸ್ ಅವಾರ್ಡ್, ಆಚೆ ಸ್ಮಾರ್ಟ್ ಪುಟಾಣಿ ಅವಾರ್ಡ್, ಆಚೆ ಬೆಸ್ಟ್ ಡಬ್‍ಸ್ಮಾಶ್ ಅವಾರ್ಡ್ ಹೀಗೆ 6 ಸ್ಪರ್ಧೆಗಳು ನಡೆದಿದ್ದು, ನೂರಾರು ಪ್ರತಿಭೆಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಮೇ26 ರಂದು ನಡೆಯಲಿರುವ ಚಿತ್ರ ಬಿಡುಗಡೆ ಸಮಾರಂಭದಂದು ಫಲಿತಾಂಶ ಹೊರಬೀಳಲಿದ್ದು ವಿಜೇತರು ಅವಾರ್ಡ್ ಹಿಡಿದು ಸಂಭ್ರಮಿಸಲಿದ್ದಾರೆ.

ಆಚೆ ಚಿತ್ರ ಇದೇ ಮೇ. 26 ರಂದು ನಿಮ್ಮೆದುರು ಬರಲಿದೆ. ಕಲೆಗೆ ಬೆಲೆ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಜನ ನಮ್ಮಂತ ಪುಟ್ಟ ಪ್ರತಿಭೆಗಳನ್ನು ಬೆಳೆಸಬೇಕೆಂಬುದು ನನ್ನ ಕೋರಿಕೆ. ಚಿತ್ರದ ಮೊದಲ ಶೋಗೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಆಗಮಿಸಿ ಪ್ರೋತ್ಸಾಹಿಸಿ ಬೆಂಬಲಿಸಿ. ನಿಮ್ಮವರನ್ನೂ ಕರೆತನ್ನಿ. ಚಿತ್ರನಿರ್ಮಾಣದಲ್ಲಿ ಪ್ರತ್ಯಕ್ಷ-ಪರೋಕ್ಷ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.” – ವಿನಾಯಕ ಬ್ರಹ್ಮೂರು, ಆಚೆ ಚಿತ್ರದ ನಿರ್ದೇಶಕ

 

Categories: ಸಿನಿ-ಕ್ರೀಡೆ

Leave A Reply

Your email address will not be published.