ಈಜಲು ತೆರಳಿದ್ದ ಇಬ್ಬರು ನೀರು ಪಾಲು: ಠಾಣೆಯಲ್ಲಿ ಪ್ರಕರಣ ದಾಖಲು

 

ಸಿದ್ದಾಪುರ: ಉತ್ತರ ಕನ್ನಡದ ಅಘನಾಶಿನಿ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಸ್ನೇಹಿತರಲ್ಲಿ ಇಬ್ಬರು ಕಾಲುಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

ಶಿರಸಿಯ ಕಬ್ಬೆ ನಿವಾಸಿಯಾದ ವೆಂಕಟೇಶ ಹೆಗಡೆ, ಅಂಚಳ್ಳಿಯ ಚಂದನ್ ಹೆಗಡೆ ಮೃತ ಪಟ್ಟಿದ್ದು, ಇವರು ತಮ್ಮ ಸ್ನೇಹಿತರ ಜೊತೆಯಾಗಿ ಒಟ್ಟೂ ನಾಲ್ವರು ಹೊಳೆಗೆ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರು ಕಾಲುಜಾರಿ ಆಳದಲ್ಲಿ ಮುಳುಗಿ ಪ್ರಾಣ  ಬಿಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.