ಶಂಕರ ಪಂಚಮಿ: ದೇವಸ್ಥಾನ ಸಿಬ್ಬಂದಿ ವರ್ಗದಿಂದ ರಥೋತ್ಸವ ಸೇವೆ


ಗೋಕರ್ಣ: ಶಂಕರ ಪಂಚಮಿ ಪ್ರಯುಕ್ತ ಪುರಾಣ ಪ್ರಸಿದ್ದ ಮಹಾಬಲೇಶ್ವರ ಮಂದಿರದಲ್ಲಿ ದೇವಾಲಯದ ಸಿಬ್ಬಂದಿ ವರ್ಗದಿಂದ ರಥೋತ್ಸವ ಸೇವೆ ವಿಜೃಂಭಣೆಯಿಂದ ನೆರವೇರಿತು. ಗುರುವಾರ ರಾತ್ರಿ ಇಲ್ಲಿನ ರಥ ಬೀದಿಯಲ್ಲಿ ಭಕ್ತರು, ದೇವಾಲಯದ ಕೆಲಸಗಾರರು ಶ್ರೀದೇವರ ರಥ ಎಳೆದು ಸಂಭ್ರಮಿಸಿದರು. ಇದರೊಂದಿಗೆ ಪ್ರತಿ ಅಮವಾಸ್ಯೆಗೆ ಜರುಗುವ ರಥೋತ್ಸವ ಮುಗಿದಿದ್ದು, ಇನ್ನು ಬರುವ ಕಾರ್ತಿಕ ಪೂರ್ಣಿಮೆಯಿಂದ ಪುನಃ ಪ್ರಾರಂಭವಾಗಲಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.