ಮನೆಯಲ್ಲೇ ರುಚಿಯಾದ ಕಚೋರಿ ಮಾಡಿ ಸವಿಯಿರಿ


ಅಡುಗೆ ಮನೆ: ಬೇಕಾಗುವ ಪದಾರ್ಥಗಳು: 250 ಗ್ರಾಂ ಮೈದಾ, ಅರ್ಧ ಚಮಚ ಉಪ್ಪು, ಅರ್ಧ ಸೌಟು ತುಪ್ಪ, ಕರಿಯಲು ಬೇಕಾಗುವಷ್ಟು ಎಣ್ಣೆ.

ಹೂರಣಕ್ಕೆ ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಉದ್ದಿನ ಬೇಳೆ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಧನಿಯಾ ಹಾಗೂ ಒಣ ಶುಂಠಿ ತಲಾ ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲಾ, ಇಂಗು, ಕೊಬ್ಬರಿ ತುರಿ,

ತಯಾರಿಸುವ ವಿಧಾನ: ಜರಡಿಯಾಡಿಸಿದ ಮೈದಾಗೆ ಉಪ್ಪು, ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲೆಸಿರಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿರಿ. ಇದಕ್ಕೆ ಜಿಡ್ಡನ್ನು ಸವರಿ ಒದ್ದೆ ಬಟ್ಟೆಯಲ್ಲಿ ಸುತ್ತಿ, ನೆನೆಯಲು ಬಿಡಿ, ಉದ್ದಿನ ಬೇಳೆಯನ್ನು 1 ರಿಂದ 2 ಗಂಟೆ ಕಾಲ ನೆನೆಹಾಕಿ, ಬಳಿಕ ತರಿತರಿಯಾಗಿ ರುಬ್ಬಿಕೊಳ್ಳಿರಿ. ಇದಕ್ಕೆ ಉಪ್ಪು ಖಾರ ಮಸಾಲೆ, ಕೊಬ್ಬರಿ ತುರಿ ಸೇರಿಸಿರಿ. ಹೂರಣ ಸಿದ್ಧವಾದ ನಂತರ ಮೈದಾ ಕಣಕವನ್ನು ಮತ್ತೊಮ್ಮೆ ತುಪ್ಪದಲ್ಲಿ ನಾದಿಕೊಂಡು, ಸಣ್ಣ ಸಣ್ಣ ಉಂಡೆಗಳಾಗಿ ಮಾಡಿರಿ. ಪೂರಿ ತರಹ ಲಟ್ಟಿಸಿರಿ. ಅದರ ಮಧ್ಯೆ 2-3 ಚಮಚ ಹೂರಣ ಇರಿಸಿ, ಮಡಿಚಿರಿ. ಮೇಲ್ಭಾಗದಲ್ಲಿ ರಂಧ್ರ ಮಾಡಿ ಕಾದ ಎಣ್ಣೆಯಲ್ಲಿ ಗರಿಗರಿಯಾಗುವಂತೆ ಕರಿಯಿರಿ. ನಿಮಗೆ ರುಚಿಯಾದ ಉದ್ದಿನ ಬೇಳೆಯ ಕಚೋರಿ ಸಿದ್ಧವಾಗಿದೆ.

Categories: ಅಡುಗೆ ಮನೆ

Leave A Reply

Your email address will not be published.