ಸಿಬಿಎಸ್‍ಸಿ ಪಠ್ಯಕ್ರಮ: ಧಾತ್ರಿ ಹೆಗಡೆ 97.50 ರಷ್ಟು ಸಾಧನೆ

ಶಿರಸಿ: ಕಳೆದ ಮಾರ್ಚನಲ್ಲಿ ನಡೆದ ಕೇಂದ್ರಿಯ ಪಠ್ಯಕ್ರಮದ ಪರೀಕ್ಷೆಯಲ್ಲಿ ಧಾತ್ರಿ ಶಶಿಕಾಂತ ಹೆಗಡೆ ಚಿಪ್ಲಿ ಶೇ.97.50 ಸಾಧನೆ ಮಾಡಿ ಗಮನ ಸೆಳದಿದ್ದಾಳೆ.

ಬೆಂಗಳೂರಿನಲ್ಲಿರುವ ನ್ಯಾಶನಲ್ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿನಿಯಾದ ಈಕೆ ಶುಭದಾ ಹೆಗಡೆ ಮತ್ತಿಹಳ್ಳಿ ಹಾಗೂ ಹಿರಿಯ ನ್ಯಾಯವಾದಿ ಶಶಿಕಾಂತ ಹೆಗಡೆ ಚಿಪ್ಲಿ ಇವರ ಮಗಳು. ಈಜು, ಬಾಸ್ಕೇಟ್‍ಬಾಲ್ ಸಂಸ್ಕೃತ, ರಾಮಾಯಣ, ಮಹಾಭಾರತ ಪರೀಕ್ಷೆಗಳಲ್ಲೂ ಅನೇಕ ಪ್ರಶಸ್ತಿ, ಪುರಸ್ಕಾರ ಪಡೆದ ಈಕೆಯ ಆಟ ಹಾಗೂ ಪಾಠದ ಸಾಧನೆ ಗಮನ ಸೆಳೆದಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.