ಸುವಿಚಾರ

ಶ್ರುತೇ ಮಹಾಕವೇಃ ಕಾವ್ಯೇ ನಯನೇ ವದನೇ ಚ ವಾಃ
ಯುಗಪದ್ಯಸ್ಯ ನೋದೇತಿ ಸ ವೃಷೋ ಮಹಿಷೋಪಿ ವಾ ||

ಮಹಾಕವಿಯೊಬ್ಬನ ಉತ್ತಮ ಕಾವ್ಯವನ್ನು ಕೇಳಿದ ಮೇಲೂ ಯಾವನ ಮುಖದಲ್ಲಿ ಮತ್ತು ಕಂಗಳಲ್ಲಿ ಸಂತೋಷದ ಮತ್ತು ರಸೋನ್ಮಾದದ ದ್ರವೋತ್ಪತ್ತಿಯಾಗದೋ ಆ ಮನುಷ್ಯ ಮನುಷ್ಯನೇ ಅಲ್ಲ – ಒಂದೋ ಎತ್ತು ಅಥವಾ ಕೋಣ. ಇಲ್ಲಿ ಕಾವ್ಯದ ರಸಿಕನಿಗಿರಬೇಕಾದ ಆಸ್ವಾದನೆಯ ಗುಣದ ಕುರಿತಾಗಿ ಹೇಳಲಾಗಿದೆ. ವಾಃ ಅನ್ನುವ ಶಬ್ದವನ್ನು ಎರಡು ಅರ್ಥದಲ್ಲಿ ಬಳಸಿದ್ದಾನೆ ಸುಭಾಷಿತಕಾರ. ವಾಃ ಅಂದರೆ ನೀರು, ಅದು ಕಾವ್ಯಾಸ್ವಾದದ ನಂತರ ರಸಿಕನ ಕಂಗಳಲ್ಲಿ ಜಿನುಗಬೇಕಾದ್ದು. ಇನ್ನೊಂದರ್ಥದಲ್ಲಿ ವಾಃ ಅನ್ನುವುದು ಪ್ರಶಂಸನೆಯ ಅರ್ಥದಲ್ಲಿ ಪ್ರಸಿದ್ಧವಾಗಿರುವ ಅನುಕರಣಾವ್ಯಯ. ಅದು ಕಾವ್ಯ ಕೇಳಿದ ಬಳಿಕ ರಸಿಕನ ಮುಖದಿಂದ ಬರಬೇಕಾದ ಶಬ್ದ. ಇವತ್ತಿನ ಆಡು ನುಡಿಯ ’ವಾಹ್ ರೆ ವಾಹ್’ ಅನ್ನುವ ಉದ್ಗಾರದೊಂದಿಗೆ ಸಾಮ್ಯ ಕಂಡು ಬಂದರೆ ಕಾಕತಾಳೀಯವೆನ್ನಿ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.