ಎರ್ನಾಕುಲಮ್ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿ ನಾಪತ್ತೆ: ಠಾಣೆಯಲ್ಲಿ ಪ್ರಕರಣ ದಾಖಲು


ಕುಮಟಾ: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಏ.18 ರಂದು ಗುರುವಾರ ತೆರಳಿದ ಐವರಲ್ಲಿ ಓರ್ವನು ಎರ್ನಾಕುಲಮ್ ರೈಲ್ವೇ ನಿಲ್ದಾಣದಲ್ಲಿ ನಾಪತ್ತೆಯಾದ ಘಟನೆ ಈಗ ಬೆಳಕಿಗೆ ಬಂದಿದೆ.

ತಾಲೂಕಿನ ವಿವೇಕನಗರದ ನಿವಾಸಿ ದತ್ತಾತ್ರೇಯ ಮಾರು ಮುಕ್ರಿ ಕಾಣೆಯಾದ ವ್ಯಕ್ತಿ(34). ನಾಗೇಂದ್ರ, ತಮ್ಮನಾದ ಗಣಪತಿ ಮುಕ್ರಿ, ಹಾಗೂ ಮಕ್ಕಳಾದ ಮಣಿಕಂಠ ಮತ್ತು ಕಾವ್ಯಾ ಇವರೊಂದಿಗೆ ತೆರಳಿದ ಈತನು ಯಾವುದೋ ಗಲಾಟೆಯ ನೆಪವೊಡ್ಡಿ ಎರ್ನಾಕುಲಮ್ ರೈಲ್ವೇ ನಿಲ್ದಾಣದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈತನನ್ನು ಕಂಡಲ್ಲಿ ತಕ್ಷಣ ಕುಮಟಾ ಪೊಲೀಸ್ ಠಾಣೆಗೆ ತಿಳಿಸಿಬೇಕೆಂದು ಪತ್ನಿ ಚೇತನಾ ನಾಯ್ಕ ಕೋರಿದ್ದಾರೆ. ಈ ಕುರಿತು ಎರ್ನಾಕುಲಮ್ ರೈಲ್ವೇಸ್ಟೇಷನ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.