ಗೋಕರ್ಣದಲ್ಲಿ ವಿಜೃಂಭಣೆಯ ಶ್ರೀ ದೇವರ ರಥೋತ್ಸವ ಸೇವೆ


ಗೋಕರ್ಣ: ಕೋಮಾರಪಂಥ ಸಮಾಜದ ವತಿಯಿಂದ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ರಥೋತ್ಸವ ಸೇವೆ ಚೈತ್ರ ಅಮಾವಸ್ಯೆ ದಿನವಾದ ಶನಿವಾರ ವಿಜೃಂಭಣೆಯಿಂದ ನೇರವೇರಿರತು.

ಪ್ರತಿ ವರ್ಷ ಈ ಸಮಾಜದವರು ಇಲ್ಲಿನ ದೇವರಿಗೆ ಸಮಾಜದವತಿಯಿಂದ ಪೂಜೆ ಸಲ್ಲಿಸಿ ರಥಬೀದಿಯಲ್ಲಿ ಶ್ರೀದೇವರ ರಥೋತ್ಸವ ನೆರವೇರುವುದು ವಿಶೇಷ. ಬೆಂಗಳೂರು, ಗೋವಾ ಮತ್ತು ಮಹಾರಾಷ್ಟ್ರಗಳಿಂದ ಕೋಮಾರಪಂಥ ಸಮಾಜದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಮಾಜದವರೇ ನೀಡಿ ಬಹುಪುರಾತನವಾದ ರಜತ ಕಳಶದಿಂದ ಆತ್ಮಲಿಂಗಕ್ಕೆ ರುದ್ರಾಭಿಷೇಕ ಪೂಜೆ ನೆರವೇರಿಸಿ ಪಾರ್ಥನೆ ಸಲ್ಲಿಸಿದರು. ಕ್ಷತ್ರಿಯ ಕೋಮಾರ ಪಂತ ಸಮಾಜದ ಅಧ್ಯಕ್ಷ ಆರ್.ಎಸ್. ನಾಯ್ಕ ಸಮಾಜದ ಪ್ರಮುಖರು ಪೂಜೆಯಲ್ಲಿ ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.