ಸವಿಯಲು ರುಚಿಯಾಗಿರುತ್ತೆ ಪನ್ನಿರ್ ಖೀರು


ಅಡುಗೆ ಮನೆ: ಪನ್ನೀರ್ ಖೀರ್ ಮಾಡಲು ಬೇಕಾಗುವ ಸಾಮಗ್ರಿ: ಪನ್ನೀರ್ 100 ಗ್ರಾಂ, ಒಂದು ಲೀಟರ್ ಹಾಲು, ಎರಡು ಚಮಚ ಖೋವಾ, ಅರ್ಧ ಕಪ್ ಸಕ್ಕರೆ, ಒಂದು ಕಪ್ ನೀರು, ಸ್ವಲ್ಪ ಏಲಕ್ಕಿ ಪುಡಿ, ಕೇಸರಿ ದಳ, ಸ್ವಲ್ಪ ಗೋಡಂಬಿ, ಬಾದಾಮಿ.

ಪನ್ನೀರ್ ಖೀರ್ ಮಾಡುವ ವಿಧಾನ: ಒಂದು ಪಾತ್ರೆಗೆ ನೀರನ್ನು ಹಾಕಿ ಸಕ್ಕರೆ ಹಾಕಿ ಬಿಸಿ ಮಾಡಿ. ಅದಕ್ಕೆ ಪನ್ನೀರ್ ನ ಸಣ್ಣ ಸಣ್ಣ ತುಂಡುಗಳನ್ನು ಹಾಕಿ. 5-7 ನಿಮಿಷ ಪನ್ನೀರ್ ಬೆಂದ ನಂತರ ಗ್ಯಾಸ್ ಬಂದ್ ಮಾಡಿ ನೀರಿನಿಂದ ಪನ್ನೀರ್ ಹೊರಗೆ ತೆಗೆಯಿರಿ. ಇನ್ನೊಂದು ಪಾತ್ರೆಗೆ ಹಾಲನ್ನು ಹಾಕಿ ಬಿಸಿ ಮಾಡಿ. ಹಾಲು ಅರ್ಧ ಲೀಟರ್ ಆಗುವವರೆಗೆ ಕುದಿಸಿ. ನಂತರ ಹಾಲಿಗೆ ಖೋವಾ ಹಾಗೂ ಪನ್ನೀರ್ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತರ ಉಳಿದ ಸಕ್ಕರೆ ಹಾಗೂ ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಕುದಿಸಿದ ನಂತರ ಗ್ಯಾಸ್ ಬಂದ್ ಮಾಡಿ ಏಲಕ್ಕಿ, ಬಾದಾಮಿ, ಗೋಡಂಬಿ ಹಾಕಿ ಅಲಂಕರಿಸಿ.

Categories: ಅಡುಗೆ ಮನೆ

Leave A Reply

Your email address will not be published.