ಮನೆಯಲ್ಲೇ ಮಾಡಿ ನೋಡಿ ಕ್ಯಾರೇಟ್ ಡ್ರೈಫ್ರೂಟ್ಸ್ ಲಾಡು


ಅಡುಗೆ ಮನೆ: ಕ್ಯಾರೆಟ್ ಡ್ರೈಫ್ರೂಟ್ಸ್ ಲಾಡು ಮಾಡಲು ಬೇಕಾಗುವ ಪದಾರ್ಥ: 2 ಕಪ್ ತುರಿದ ಕ್ಯಾರೆಟ್, ಲೀಟರ್ ಹಾಲು, 2 ಕಪ್ ಸಕ್ಕರೆ ಪುಡಿ, 1 ಕಪ್ ಮಿಲ್ಕ್ ಮೇಡ್, 1 ಕಪ್ ಕಾಯಿತುರಿ, 1 ಚಮಚ ತುಪ್ಪದಲ್ಲಿ ಹುರಿದ ಮೈದಾಹಿಟ್ಟು, ಕಪ್ ತುಪ್ಪ, 1 ಚಮಚ ಏಲಕ್ಕಿ, ಳಿ ಕಪ್ ಹುಡಿ ಮಾಡಿದ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಳಿ ಕಪ್ ಒಣಕೊಬ್ಬರಿ

ಮಾಡುವ ವಿಧಾನ: ಬಾಣೆಲೆಗೆ ತುಪ್ಪ ಹಾಕಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಹಾಕಿ ಹುರಿದುಕೊಳ್ಳಿ. ನಂತರ ಡ್ರೈಫ್ರೂಟ್ಸ್ ತೆಗೆದು, ಅದೇ ತುಪ್ಪದಲ್ಲಿ ಕ್ಯಾರೆಟ್ ಹುರಿಯಿರಿ. ನಂತರ ಸಕ್ಕರೆ, ಹಾಲು, ಕಾಯಿತುರಿ ಸೇರಿಸಿ. ಹಾಲು ಇಂಗುತ್ತಿದ್ದ ಹಾಗೆ ಮೈದಾಹಿಟ್ಟು ಹಾಕಿ ತಿರುವಿ. ನಂತ್ರ ಮಿಲ್ಕ್ ಮೇಡ್ ಸೇರಿಸಿ. ತಳ ಹಿಡಿಯದಂತೆ ಕೈ ಆಡಿಸುತ್ತಿರಿ. ಏಲಕ್ಕಿ ಪುಡಿ, ಡ್ರೈಫ್ರೂಟ್ಸ್, ಉಳಿದ ತುಪ್ಪ ಹಾಕಿ ಗಟ್ಟಿಯಾಗುವವರೆಗೂ ಕೈ ಆಡಿಸಿ. ಲಾಡಿನ ಹದಕ್ಕೆ ಬಂದ ನಂತ್ರ ಕೆಳಗಿಳಿಸಿ. ತಣ್ಣಗಾದ ನಂತರ ಉಂಡೆ ಕಟ್ಟಿದರೆ,ಕ್ಯಾರೇಟ್ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧ.

Categories: ಅಡುಗೆ ಮನೆ

Leave A Reply

Your email address will not be published.