ಟೇಸ್ಟಿಯಾದ ಕ್ರೀಮ್ ಬಿಸ್ಕತ್ ಮಾಡಿ ನೊಡಿ


ಅಡುಗೆ ಮನೆ: ಬೇಕಾಗುವ ಪದಾರ್ಥಗಳು: ಮೂರು ಕಪ್ ಮೈದಾ ಹಿಟ್ಟು, 4 ಕಪ್ ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 ಮೊಟ್ಟೆ.

ತಯಾರಿಸುವ ವಿಧಾನ: ಕ್ರೀಮ್ ತಯಾರು ಮಾಡಿಕೊಳ್ಳಲು ಬೆಣ್ಣೆಯನ್ನು ಸ್ವಲ್ಪ ಬೀಸಿದ ಸಕ್ಕರೆಯೊಂದಿಗೆ ಚಿನ್ನಾಗಿ ಉಜ್ಜಿ. ಮಿಶ್ರಣಕ್ಕೆ ಸ್ವಲ್ಪ ಎಸೆನ್ಸ್ ಹಾಕಿ. ಕ್ರೀಮ್ ಸಿದ್ಧವಾಗುತ್ತದೆ. ಈ ಮಿಶ್ರಣವನ್ನು ಮೈದಾ ಹಾಗೂ ಕಸ್ಟರ್ಡ್ ಪೌಡರಿನ ಮಿಶ್ರಣಕ್ಕೆ ಬೆರೆಸಿ. ಮೊಟ್ಟೆಯೊಳಗಿನ ತಿರುಳನ್ನು ಹಾಕಿ ಚೆನ್ನಾಗಿ ಬೆರೆಸಿದರೆ ಮುದ್ದೆಯಂತಾಗುತ್ತದೆ.
ಒಂದು ಮಣೆಯ ಮೇಲೆ ಈ ಮುದ್ದೆಯನ್ನು ಒತ್ತಿ ಒಂದು ನಿರ್ದಿಷ್ಟ ಉದ್ದ ಮತ್ತು ದಪ್ಪ ಗಾತ್ರಕ್ಕೆ ಕುಯ್ದು ಓವನ್ ನಲ್ಲಿ ಬೇಯಿಸಿ. ಆರಿದ ಮೇಲೆ ಎರಡು ಬಿಸ್ಕತ್ ಗಳ ಮಧ್ಯೆ ಕ್ರೀಮ್ ಸವರಿ ಮುಚ್ಚಿ. ಕ್ರೀಮ್ ಬಿಸ್ಕತ್ ತಯಾರಾಗುತ್ತದೆ.

Categories: ಅಡುಗೆ ಮನೆ

Leave A Reply

Your email address will not be published.