ಸ್ಮರಣ ಸಂಚಿಕೆಗೆ ಹೆಸರು ನೀಡಲು ಸೂಚನೆ

ಶಿರಸಿ: ನಗರದ ಟಿಆರ್‌ಸಿ ಬ್ಯಾಂಕ್ ಶತಮಾನೋತ್ಸವ ನೆನಪಿನಲ್ಲಿ ’ಸ್ಮರಣಸಂಚಿಕೆ’ ಯನ್ನು ಹೊರತರಲು ನಿರ್ಧರಿಸಿದೆ. ಸಂಘದ ಸದಸ್ಯರು ಇದಕ್ಕೆ ಸೂಕ್ತ ಹೆಸರನ್ನು ಸೂಚಿಸಬಹುದಾಗಿದ್ದು, ಉತ್ತಮ ಹೆಸರನ್ನು ಸೂಚಿಸಿ ಆಯ್ಕೆಯಾದ ಸದಸ್ಯರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

ಆಸಕ್ತರು ಸ್ಮರಣಸಂಚಿಕೆ ಸೂಚಿಸುವ ಹೆಸರು, ತಮ್ಮ ಹೆಸರು ಮತ್ತು ವಿಳಾಸ, ಸಂಘದಲ್ಲಿನ ತಮ್ಮ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳ ಮಾಹಿತಿಯೊಂದಿಗೆ ಮೇ.31 ರೊಳಗಾಗಿ ಖುದ್ದಾಗಿ ಸಂಘಕ್ಕೆ ಬಂದು ಅಥವಾ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9740673262/ 8762382488 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.