ಫಟಾಫಟ್ ಮಾಡಬಹುದು ಈರುಳ್ಳಿ ಪಲಾವ್


ಅಡುಗೆ ಮನೆ: ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, 2 ಚೂರು ದಾಲ್ಚಿನಿ, ಒಂದು ಚಮಚ ಜೀರಿಗೆ, 2 ಬಟ್ಟಲು ತುಪ್ಪ, 1/2 ಕೆ.ಜಿ ಸಾಂಬಾರ ಈರುಳ್ಳಿ, 4 ಹಸಿಮೆಣಸಿನ ಕಾಯಿ, ಒಂದು ಬಟ್ಟಲು ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು 20 ನಿಮಿಷ ನೆನೆಸಿ, ನೀರು ಚೆಲ್ಲಿಡಿ. ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಜೀರಿಗೆ, ಈರುಳ್ಳಿ, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಲವಂಗ, ದಾಲ್ಚಿನಿ ಹಾಕಿ. ಅಕ್ಕಿ ಹಾಕಿ ಸ್ವಲ್ಪ ಹುರಿದು, ನಾಲ್ಕು ಲೋಟ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಬೇಯಿಸಿ. ಸಾಂಬಾರ ಈರುಳ್ಳಿಯನ್ನು ನೀರು ಹಾಕಿ ಬೇಯಿಸಿಕೊಂಡು, ಅದನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಬೇಯಿಸಿದರೆ ರುಚಿ-ರುಚಿಯಾದ ಈರುಳ್ಳಿ ಪಲಾವ್ ಸವಿಯಲು ಸಿದ್ದ.

Categories: ಅಡುಗೆ ಮನೆ

Leave A Reply

Your email address will not be published.