ಮೇ. 4 ಕ್ಕೆ ಕೋಕಂ- ಹಣ್ಣಿನ ಸಂಸ್ಕರಣೆಯ ಕಾರ್ಯಾಗಾರ

ಶಿರಸಿ: ಕದಂಬ ಮಾರ್ಕೆಟಿಂಗ್ ಶಿರಸಿ, ಕ.ವಿ.ವಿ ಧಾರವಾಡ, ನಬಾರ್ಡ್, ಕೋಕಂ ಫೌಂಡೇಶನ್, ತೋಟಗಾರಿಕಾ ಇಲಾಖೆ, ಉತ್ತರ ಕನ್ನಡ ಪ್ರಾಂತೀಯ ಸಾವಯವ ಸಹಕಾರ ಸಂಘಗಳ ಒಕ್ಕೂಟ ಇವುಗಳ ಆಶ್ರಯದಲ್ಲಿ ಮೇ 4 ರಂದು ಕೋಕಂ-  ಹಣ್ಣಿನ ಸಂಸ್ಕರಣೆ, ಮೌಲ್ಯವರ್ಧನೆ ಕುರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ಮಾರುಕಟ್ಟೆ ಮಾಡಲು ಯೋಗ್ಯವಾಗುವಂತೆ ಮುರುಗಲು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಬಗ್ಗೆ ತಜ್ಞರು ತರಬೇತಿ ನೀಡಲಿದ್ದಾರೆ. ಈಗಾಗಲೆ ಕೋಕಂ ಹಣ್ಣಿನ ಉತ್ಪನ್ನಗಳ ಉದ್ದಿಮೆ ನಡೆಸುತ್ತಿರುವವರು ಆಸಕ್ತರಿಗೆ ತರಬೇತಿ ನೀಡಿ ಸಾಧಕ ಬಾಧಕದ ಅನುಭವ ಹಂಚಿಕೊಳ್ಳಲಿದ್ದಾರೆ. ಕಾರ್ಯಾಗಾರದಲ್ಲಿ ಉತ್ತಮ ಗುಣಮಟ್ಟದ ಕಸಿ ಮಾಡಿದ ಕೋಕಂ ಸಸಿಗಳು ಮುರುಗಲು ಹಣ್ಣಿನ ವಿವಿಧ ಉತ್ಪನ್ನಗಳು ಲಭ್ಯವಿರಲಿದೆ. ಆಸಕ್ತ ರೈತರಿಗೆ ಸಸಿ ವಿತರಣೆಯಿಂದ ಮೌಲ್ಯವರ್ಧನೆ, ಮಾರುಕಟ್ಟೆವರೆಗಿನ ಎಲ್ಲ ಸಹಕಾರವನ್ನು ನೀಡಲು ಉದ್ದೇಶಿಸಲಾಗಿದೆ. ಕೋಕಂ ಉತ್ಪನ್ನಗಳ ಮಳಿಗೆ ತೆರೆಯಲು ಕೂಡ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ಕದಂಬ ಮಾರ್ಕೆಟಿಂಗ್ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.