ಬಿಜೆಪಿ ಮಾಡಿದ ಆರೋಪಕ್ಕೆ ಅಸ್ನೋಟಿಕರ್ ಬಳಿ ಉತ್ತರವಿಲ್ಲ: ರಾಜೇಶ ನಾಯಕ

ಕಾರವಾರ: ಜನತಾ ಪಾರ್ಟಿಯು ಈ ಮೊದಲು ಬಿಡುಗಡೆ ಮಾಡಿದ ಆರೋಪ ಪತ್ರಕ್ಕೆ ಉತ್ತರ ನೀಡುವ ಬದಲು ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ ಅಸ್ನೋಟಿಕರ ಅವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದ್ದಾರೆ. ಆ ಮೂಲಕ ಬಿಜೆಪಿ ಮಾಡಿದ ಆರೋಪಕ್ಕೆ ತನ್ನಲ್ಲಿ ಉತ್ತರವಿಲ್ಲ ಎಂದು ಅವರು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ ಹೇಳಿದರು.

ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ದಾಸವಾಣಿಯಂತೆ ಆನಂದ ಅವರು ತನ್ನ ಸಂಸ್ಕಾರವನ್ನು ಬಹಿರಂಗ ಪಡಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರು ಪಕ್ಷಗಳನ್ನು ಬದಲಾಯಿಸುವ ಮೂಲಕ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಆನಂದ ಅವರನ್ನು ನಾವೂ ಮಂಗನಿಗೆ ಹೋಲಿಕೆ ಮಾಡಬಹುದಿತ್ತು. ಈ ಮಂಗ ಕಾರವಾರದ ಕ್ಷೇತ್ರದಲ್ಲಿ ತನ್ನ ಮಂಗನಾಟದ ಮೂಲಕ ಇಡೀ ಕ್ಷೇತ್ರದಲ್ಲಿ ಮಂಗನ ಕಾಯಿಲೆ ಹರಡಿದ್ದರಿಂದ ಕಳೆದ ಎರಡು ಚುನಾವಣೆಯಲ್ಲಿ ಜನ ತಕ್ಕ ಚುಚ್ಚು ಮದ್ದು ನೀಡಿ ಮನೆಯಲ್ಲಿ ಕುಳ್ಳಿರಿಸಿದ್ದಾರೆ. ಆದರೆ ಈ ಮಂಗ ಈಗ ಮಂಗನಕಾಯಿಲೆಯನ್ನು ಇಡೀ ಕ್ಷೇತ್ರಕ್ಕೆ ಹರಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಪ್ರತಿಬಂಧಕ ಚುಚ್ಚುಮದ್ದು ಜಿಲ್ಲೆಯ ಜನ ನೀಡಲಿದ್ದಾರೆ ಎಂದು ನಾವು ಹೇಳಬಹುದಾದರೂ ನಾವು ಆ ಮಟ್ಟಕ್ಕೆ ಇಳಿಯುತ್ತಿಲ್ಲ.

ಈ ಮೂಲಕ ಆನಂದ ಅಸ್ನೋಟಿಕರ ಅವರ ವಿರುದ್ಧ ಎರಡನೇ ಆರೋಪ ಪತ್ರವನ್ನು ಈ ಮೂಲಕ ಬೀಡುಗಡೆ ಮಾಡುತ್ತಿದ್ದು ಅದಕ್ಕೆ ಆನಂದ ಬಹಿರಂಗ ಉತ್ತರ ನೀಡಲಿ ಎಂದು ಸವಾಲು ಹಾಕುತ್ತಿದ್ದೇವೆ.

ಆರೋಪ 5: ಆನಂದ ಅಸ್ನೋಟಿಕರ ಅವರು ಹಿಂದುಗಳು ಧರಿಸುವ ಕೇಸರಿ ಶಾಲು, ನಾಮ ದೇವಾಲಯಗಳು ಹಾಗೂ ಮಠ ಮಂದಿರಗಳ ಕುರಿತಾಗಿ ಕೇವಲವಾಗಿ ಮಾತನಾಡುತ್ತ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಅಲ್ಲದೇ ಹಿಂದುಗಳು ಜಿಲ್ಲೆಯಲ್ಲಿ ಗಲಭೆ ಹುಟ್ಟಿಸುವ ಮೂಲಕ ಅಲ್ಪಸಂಖ್ಯಾರನ್ನು ಓಲೈಸುತ್ತಿದ್ದಾರೆ. ಜಿಲ್ಲೆಯ ಭಟ್ಕಳ ಮೂಲದ ಯಾಸೀನ್ ಭಟ್ಕಳ, ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ರಂಥಹ ಜಾಗತಿಕ ಭಯೋತ್ಪಾದಕರು ಅಫಘಾನಿಸ್ಥಾನ, ಸಿರಿಯಾ ಹಾಗೂ ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದರೂ ಅವರ ವಿರುದ್ಧ ಚಕಾರ ಎತ್ತದ ಆನಂದ ಈಗ ಹಿಂದುಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೋಮು ಸೌಹಾರ್ದದ ಮಾತನಾಡುತ್ತಿದ್ದಾನೆ. ಜಿಲ್ಲೆಯ ಭಟ್ಕಳ ಮೂಲದ ಭಯೋತ್ಪಾದರು ಭಾರತದಲ್ಲಿ ಹಲವು ಕಡೆ ಬಾಂಬ್ ದಾಳಿ ನಡೆಸಿ ಹಲವು ಅಮಾಯಕ ಹಿಂದುಗಳ ಸಾವಿಗೆ ಕಾರಣವಾದರೂ ಆನಂದ ಆ ಬಗ್ಗೆ ಚಕಾರವೆತ್ತಿಲ್ಲ. ಆದರೆ ಹಿಂದು ಯುವಕರು ಜಿಲ್ಲೆಯಲ್ಲಿ ಗಲಭೆನಡೆಸಿ ರಕ್ತಪಾತವನ್ನು ನಡೆಸುತ್ತಿದ್ದಾರೆ ಎಂಬರ್ಥದಲ್ಲಿ ಎಲ್ಲ ಕಡೆ ಭಾಷಣ ಮಾಡಿ ಜಿಲ್ಲೆಯ ಹಿಂದುಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅಸ್ನೋಟಿಕರ ಅವರಿಂದ ನಿರಂತರವಾಗಿ ನಡೆದಿದೆ. ತನ್ನ ಹಿಂದೂ ವಿರೋಧಿ ನೀತಿಯಿಂದ ಅಲ್ಪಸಂಖ್ಯಾತರ ಓಟು ಗಳಿಸುವ ಆನಂದ ಅವರು ಭಟ್ಕಳ ಮೂಲದ ಭಯೋತ್ಪಾದಕರ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸಬೇಕು. ಹಾಗೂ ವಿನಾಕಾರಣ ಹಿಂದುಗಳ ವಿರುದ್ಧ ಕಿಡಿ ಕಾರಿದ್ದ ಬಗ್ಗೆ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸುತ್ತೇವೆ.

ಆರೋಪ 6: ತನ್ನ ಬಹಿರಂಗ ಸಭೆಯಲ್ಲಿ ಆನಂದ ಅವರು ಅನಂತ ಕುಮಾರ ಅವರನ್ನು ಟೀಕಿಸುತ್ತ ಬಿಜೆಪಿ ಅಬ್ಯರ್ಥಿ ಅನಂತ ಕುಮಾರ ಅವರು ಹಿಂದುಗಳ ರಕ್ಷಣೆ ಮಾಡುವುದಾದಲ್ಲಿ ಮಠ-ಅಥವಾ ಮಂದಿರ ಕಟ್ಟಿಕೊಳ್ಳಬೇಕೇ ಹೊರತು ರಾಜಕಾರಣದಲ್ಲಿ ಇರಬಾರದು ಎಂದು ಟೀಕಿಸುತ್ತಿದ್ದಾರೆ. ಆ ಮೂಲಕ ಹಿಂದುಗಳ ಮಠ ಹಾಗೂ ಸ್ವಾಮಿಜಿಗಳನ್ನು ಕೀಳಾಗಿ ಮಾತನಾಡಿದ್ದಾರೆ. ಆದರೆ ಇದೇ ಆನಂದ ಅವರು ತಾನು ಮಸೀದಿಯಲ್ಲಿ ನಮಾಜು ಸಲ್ಲಿಸುತ್ತಿರುವ ಫೋಟೊಗಳನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕುವುದರ ಮೂಲಕ ತಾನು ಕಪಟ ಹಿಂದು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ತನ್ನನ್ನು ತಾನು ಹಿಂದು ಎಂದು ತನ್ನ ಚುನಾವಣಾ ಅಫಿಡೆವಿಟ್ ನಲ್ಲಿ ನಮೂದಿಸಿದ ಆನಂದ ಅವರು ಮಸೀದಿಯಲ್ಲಿ ನಮಾಜು ಮಾಡುತ್ತಿರುವುದು ಯಾರನ್ನು ಓಲೈಸಲಿಕ್ಕೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ನಾಮ ಹಾಕಿಕೊಳ್ಳುವವರನ್ನು, ಕೇಸರಿ ಬಟ್ಟೆ ಧರಿಸುವವರನ್ನು ಕೀಳಾಗಿ ಹಾಗೂ ಹೀನಾಯವಾಗಿ ನಿಂದಿಸುವ ಆನಂದ ಅವರು ಮಸೀದಿಯಲ್ಲಿ ನಮಾಜು ಮಾಡುತ್ತಿರುವ ಹಿನ್ನಲೆ ಏನು? ಇದು ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರುವ ತಂತ್ರವಲ್ಲವೇ? ಜಾತ್ಯಾತೀತ ಎಂದು ತೋರಿಕೊಳ್ಳಲು ಮಸೀದಿಗೆ ಹೋಗಿ ನಮಾಜು ನಡೆಸುವುದು ಅನಿವಾರ್ಯವೇ? ಹಾಗಾದರೆ ಆನಂದ ಅವರು ತಮ್ಮ ಸಭೆಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿರುವ ಎಷ್ಟು ಮುಸ್ಲಿಂ ನಾಯಕರು ದೇವಾಲಯಗಳಲ್ಲಿ ಮೂರ್ತಿ ಪೂಜೆಗೆ ಸಿದ್ದರಿದ್ದಾರೆ ಎಂಬುದನ್ನು ಆನಂದ ಅವರು ಹೇಳಬೇಕು. ಕೇವಲ ಹಿಂದುಗಳನ್ನು ದೂಷಿಸುವ ಮೂಲಕ ಓಟು ಗಳಿಸುವ ಪ್ರಯತ್ನದಲ್ಲಿರುವ ಅವರು ತಮಗೆ ಹಿಂದೂಗಳ ಮತ ಬೇಡವೇ ಎನ್ನುವುದನ್ನು ಸ್ಪಷ್ಟ ಪಡಿಸಲಿ.

ಆರೋಪ 7: ಭಾರತೀಯ ಜನತಾ ಪಾರ್ಟಿಯು ಹಣಕೋಣ ಗಲಭೆಗೆ ಸಂಬಂಧಿಸಿದಂತೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಕಾರವಾರದ ಪತ್ರಿಕಾಗೋಷ್ಟಿಯಲ್ಲಿ ಉತ್ತರಿಸುತ್ತ ಆನಂದ ಅವರು ಹಣಕೋಣದಲ್ಲಿ ನಡೆದ ಪೆÇಲೀಸ್ ದೌರ್ಜನ್ಯಕ್ಕೆ ತಾನು ಕಾರಣನಲ್ಲ. ಅದಕ್ಕೆ ಆಗಿನ (2010-11 ರಲ್ಲಿ) ಕೇಂದ್ರ ಸರಕಾರ ಕಾರಣ. ಈ ಯೋಜನೆಗೆ ಅನುಮತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಆಗಿನ ಕೇಂದ್ರಸರಕಾರ ನೀಡಿತ್ತು ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಹಣಕೋಣದಲ್ಲಿ ಪೋಲಿಸ್ ದೌರ್ಜನ್ಯ ನಡೆದಾಗ ಕೇಂದ್ರದಲ್ಲಿ ಸೋನಿಯಾ ನೇತೃತ್ವದ ಯುಪಿಎ (ಕಾಂಗ್ರೆಸ್) ಸರಕಾರವಿತ್ತು. ಕಾರವಾರದ ಆಗಿನ ಶಾಸಕ ಆನಂದ ಅಸ್ನೋಟೀಕರ ರಾಜ್ಯದ ಸರಕಾರದಲ್ಲಿ ಮಂತ್ರಿಯಾಗಿದ್ದರು. ಈಗ ಆನಂದ ಅವರ ಜೆಡಿಎಸ್ ಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ಬೆಂಬಲ ನೀಡುತ್ತಿದೆ. ಹೀಗಿರುವಾಗ ತನ್ನ ಹಣಕೋಣದ ಪಾಪದ ಮೂಟೆಯನ್ನು ಆನಂದ ಅವರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಮುಖಂಡ ಮಾಜಿ ಶಾಸಕ ಸತೀಶ ಸೈಲ್ ಅವರ ಹೆಗಲಿಗೆ ಆನಂದ ಅವರು ಜಾರಿಸುತ್ತಿದ್ದಾರೆ. ಅಲ್ಲದೇ ಆಗ ವಿರೋಧ ಪಕ್ಷದಲ್ಲಿ ಇದ್ದ ಸಂಸದ ಅನಂತ ಕುಮಾರ ಹಾಗೂ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೂ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಮೈತ್ರಿಧರ್ಮವನ್ನು ಪಾಲಿಸುವುದಾಗಿ ಹೇಳುತ್ತಲೇ ಸೈಲ್ ಗೆ ಖೆಡ್ಡಾ ತೋಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡರು ಹಾಗೂ ಆಗಿನ ಕಾಂಗ್ರೆಸ್ಸಿನ ಕೇಂದ್ರ ಸರಕಾರ ಇಂಡ್-ಭಾರತ ಕಂಪನಿಯ ಆಮಿಷಕ್ಕೆ ಒಳಗಾಗಿ ತನ್ನ ವಿರೋಧವಿದ್ದಾಗಲೂ ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರಸರಕಾರ ಈ ಯೋಜನೆಗೆ ಮಂಜೂರಿ ನೀಡಿತ್ತು ಹಾಗೂ ಜನರ ಮೇಲೆ ದೌಜ್ರ್ಯನ್ಯ ನಡೆಸಿತ್ತು ಎಂಬ ಆನಂದ ಅಸ್ನೋಟಿಕರ ಪರೋಕ್ಷ ಆರೋಪಕ್ಕೆ ಕಾಂಗ್ರೆಸ್ಸಿನ ಸಚಿವ ಆರ್ ವಿ ದೇಶಪಾಂಡೆ ಹಾಗೂ ಮಾಜಿ ಶಾಸಕ ಸೈಲ್ ಸ್ಪಷ್ಟನೆ ನೀಡಲಿ. ಅಲ್ಲದೇ ಈ ದೌಜ್ರ್ಯನ್ಯದ ಬಗ್ಗೆ ಮಾತನಾಡುತ್ತ ಅದನ್ನು ಪ್ರತಿಭಟಿಸದಂತೆ ಆಗಿನ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ಹಾಗೂ ಸಂಸದ ಅನಂತ ಕುಮಾರ ಅವರು ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಆನಂದ ಸುಳ್ಳು ಹೇಳಿದ್ದಾರೆ. ಇದು ನಿಜವೇ ಆದಲ್ಲಿ ಆನಂದ ಹಣಕೋಣದ ಸಾತೇರಿ ದೇವಾಲಯದ ಎದುರು ನಿಂತು ಆಣೆ-ಪ್ರಮಾಣ ಮಾಡಿ ಹೇಳಲಿ. ಇಲ್ಲದಿದ್ದಲ್ಲಿ ಸಾರ್ವಜನಿಕರ ಕ್ಷಮೆ ಕೇಳಲಿ ಎಂದು ಆಗೃಹಿಸುತ್ತಿದ್ದೇವೆ.

ಆರೋಪ 8: ಒಂದು ಕಡೆ ತಾನು ಹಿಂದುಳಿದವರ ಹರಿಕಾರ ಎಂದು ಭಾಷಣ ಮಾಡುತ್ತ ಇತರ ವರ್ಗದ ಜನರನ್ನು ದೂಷಿಸುವ ಮೂಲಕ ಆನಂದ ಅವರು ಕ್ಷೇತ್ರದಲ್ಲಿ ವರ್ಗ ಸಂಘರ್ಷ ನಡೆಸಲು ಯತ್ನಿಸುತ್ತಿದ್ದಾರೆ. ಆದರೆ ತನ್ನ ಮತಬೇಟೆಗಾಗಿ ಮೇಲ್ವರ್ಗಕ್ಕೆ ಸೇರಿದ ಸಚಿವ ಆರ್ ವಿ ದೇಶಪಾಂಡೆ ಅವರ ಕಾಲಿಗೆ ಬಹಿರಂಗವಾಗಿ ಬಿದ್ದು ದ್ವಂದ ನೀತಿಯನ್ನು ಅನುಸರಿಸುತ್ತಿದ್ದಾರೆ. ಅಲ್ಲದೇ ಮೇಲ್ವರ್ಗಕ್ಕೆ ಸೇರಿದ ಶಿವರಾಮ ಹೆಬ್ಬಾರ, ಸತೀಶ ಸೈಲ್. ಶಶಿಭೂಷಣ ಹೆಗಡೆ, ಶ್ರೀಕಾಂತ ಘೋಟ್ನೆಕರ ಮುಂತಾದವರನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದು ಜಿಲ್ಲೆಯ ಜನರನ್ನು ಹಾದಿ ತಪ್ಪಿಸುವ ತಂತ್ರವಾಗಿದೆ. ಅಕಸ್ಮಾತ್ ಆನಂದ ಅವರು ಈ ಚುನಾವಣೆಯನ್ನು ಹಿಂದುಳಿದವರ ಅಸ್ಮಿತೆಗೋಸ್ಕರ ಸ್ಪರ್ದಿಸುತ್ತಿದ್ದರೆ ಅವರು ದೇಶಪಾಂಡೆ, ಘೋಟ್ನೆಕರ ಹಾಗೂ ಹೆಬ್ಬಾರ ಸೇರಿದಂತೆ ಎಲ್ಲ ಮೇಲ್ವರ್ಗದ ಎಲ್ಲ ನಾಯಕರನ್ನು ತನ್ನ ಚುನಾವಣಾ ಸಭೆಗಳಿಂದ ದೂರ ಇಡುವುದಾಗಿ ಬಹಿರಂಗವಾಗಿ ಘೋಷಿಸಬೇಕು ಅಲ್ಲದೇ ಈ ನಾಯಕರುಗಳ ಅವಶ್ಯಕತೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.