ಗೋಕರ್ಣದಲ್ಲಿ ಸಂಪನ್ನಗೊಂಡ ಕಾಮಾಘನಾಶಿನಿ ಸಂದರ್ಶನೋತ್ಸವ

ಗೋಕರ್ಣ: ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ಕಾಮಾಘನಾಶಿನಿ ಸಂದರ್ಶನೋತ್ಸವ ವಿಜೃಭಂಣೆಯಿಂದ ಬುಧವಾರ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ ಶ್ರೀ ದೇವರ ಉತ್ಸವ ದೇವಾಲಯದಿಂದ ತದಡಿಗೆ ತೆರಳಿತು. ಬುಧವಾರ ಮುಂಜಾನೆ ಅಘನಾಶಿನಿ ನದಿಗೆ ಪೂಜೆ, ಸಂಕಲ್ಪ ಸ್ನಾನ ಪೂರೈಸಿ, ಅಶ್ವಥಗಣಪತಿ ದೇವಾಲಯದಲ್ಲಿ ಕುಳಿತು ಪೂಜೆ ಸ್ವೀಕರಿಸಿ ಮಧ್ಯಾಹ್ನ ದೇವಾಲಯಕ್ಕೆ ಮರಳಿತು.

ಉತ್ಸವದ ವಿಶೇಷ: ಜೀವ ವೈವಿದ್ಯತೆಯಿಂದ ಕೊಡಿದ ಅಘನಾಶಿನಿ ನದಿಗೆ ಶ್ರೀ ದೇವರ ಉತ್ಸವ ತೆರಳಿ ಪೂಜೆಸಲ್ಲಿಸುವುದು ವಿಶೇಷ. ಪ್ರತಿ ವರ್ಷ ಪರಶಿವನ ಉತ್ಸವ ಮಳೆಗಾಲ ಮುಗಿದ ನಂತರ ಗಂಗಾಷ್ಟಮಿಯಂದು ಗಂಗಾವಳಿಗೆ ನದಿಗೆ ದೇವರು ತೆರಳಿದರೆ, ಮಳೆಗಾಲ ಸಮೀಪಿಸುತ್ತಿರುವ ದಿನಗಳಲ್ಲಿ ಅಘನಾಶಿನಿ ನದಿಗೆ ಪೂಜೆಸಲ್ಲಿಸುವುದು ಅದು ಆರು ತಿಂಗಳ ಅಂತರದಲ್ಲಿ ಎರಡು ಪ್ರಮುಖ ನದಿಗಳಿಗೆ ಶ್ರೀ ದೇವರ ಉತ್ಸವ ತೆರಳಿ ಪೂಜೆ ಕೈಗೊಳ್ಳುವುದು ವಿಶೇಷವಾಗಿದೆ. ಕಾಮಾಘನಾಶಿನ ಸಂದರ್ಶನೋತ್ಸವ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು.

ಕಳೆದ ಹತ್ತು ವರ್ಷದ ಹಿಂದೆ ದೇವಾಲಯದ ಆಡಳಿತ ವಹಿಸಿಕೊಂಡ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ರೂಡಿಗತ ಪರಂಪರೆಯಂತೆ ನಡೆಯಬೇಕಿದ್ದ ಉತ್ಸವ, ಪೂಜೆ ಸ್ಥಗಿತಗೊಂಡಿದ್ದನ್ನು ಪುನಃ ಪ್ರಾರಂಭಸಿದ್ದು, ಅದರಂತೆ ಈ ಉತ್ಸವವು ಶ್ರೀಗಳ ಮಾರ್ಗದರ್ಶನದಲ್ಲಿ ನಡೆದ 11ನೇ ಉತ್ಸವವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.