ಸುವಿಚಾರ

ನ ಬ್ರಹ್ಮವಿದ್ಯಾ ನ ಚ ರಾಜ್ಯಲಕ್ಷ್ಮೀಃ ತಥಾ ಯಥೇಯಂ ಕವಿತಾ ಕವೀನಾಮ್
ಲೋಕೋತ್ತರೇ ಪುಂಸಿ ನಿವೇಶ್ಯಮಾನಾ ಪುತ್ರೀವ ಹರ್ಷಂ ಹೃದಯೇ ಕರೋತಿ ||

ಬ್ರಹ್ಮವಿದ್ಯೆಯಾಗಲೀ, ರಾಜ್ಯಲಕ್ಷ್ಮಿಯಾಗಲೀ, ಕವಿತೆಯಷ್ಟು ಆನಂದವನ್ನು ಯಾವ ಕವಿಗೂ ತಂದುಕೊಡುವುದಿಲ್ಲ. ಕವಿಯೊಬ್ಬನಿಗೆ ಕವಿತೆಯು ಅಥವಾ ಕಾವ್ಯವು ತಂದುಕೊಡುವ ಆನಂದವಿದೆಯಲ್ಲ ಅದೊಂದು ರೀತಿಯಲ್ಲಿ ಲೋಕೋತ್ತರನಾದ ವರನಿಗೆ ಕೊಟ್ಟು ಮದುವೆ ಮಾಡಿದ ತಂದೆಗೆ ಆ ಮಗಳು ತರುವ ಆನಂದದಂತೆ ಅಸದಳವಾದ್ದು. ಕಾವ್ಯಾನಂದದ ಮುಂದೆ, ಆ ಸಂಪದದ ಮುಂದೆ ಕವಿಯೊಬ್ಬನಿಗೆ ಬೇರಾವುದೂ ದೊಡ್ಡದಲ್ಲ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.