ಚೈತನ್ಯ ಪದವಿಪೂರ್ವ ಕಾಲೇಜು ಶೇ. 91ರಷ್ಟು ಸಾಧನೆ

ಶಿರಸಿ: ನಗರದ ಎಂಇಎಸ್ ಶಿಕ್ಷಣ ಸಂಸ್ಥೆಯ ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 91ರಷ್ಟು ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಶೇ. 92 ರಷ್ಟು, ವಾಣಿಜ್ಯ ವಿಭಾಗದಲ್ಲಿ ಶೇ.90ರಷ್ಟು ಫಲಿತಾಂಶ ಸಾಧಿಸಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 235 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 128 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಿಖಿಲ್ ಹೆಗಡೆ ಹಾಗೂ ಸಾತ್ವಿಕ್ ಭಾಗವತ ಶೇ.98.01 (589) ಅಂಕ ಪಡೆದು ಪ್ರಥಮ ಸ್ಥಾನದಲ್ಲಿ, ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾರೆ. ಮಹೇಶ ಹೆಗಡೆ ಹಾಗೂ ನಿತೀಶ ಹೆಗಡೆ 586 ಅಂಕಗಳಿಸಿ ದ್ವಿತೀಯ ಸ್ಥಾನ, ನಿರಂಜನ ಹೆಗಡೆ 582 ಂಕ ಪಡೆದು ತೃತೀಯ ಸ್ಥಾನ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 89 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದರ್ಶನ್ ಹೆಗಡೆ 577 ಅಂಕ ಪಡೆದು ಪ್ರಥಮ, ಪ್ರವೀಣ ಗೋಲಗೇರಿ 575 ಅಂಕ ಪಡೆದು ದ್ವಿತೀಯ ಹಾಗೂ ರೋಹನ ಹನಕನಹಳ್ಳಿ 572 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಆಡಳಿತ ಮಂಡಳಿಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.