70 ವರ್ಷದ ಅವಧಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಕುಂಠಿತ: ನಿರ್ಮಲಾ ಸೀತಾರಾಮನ್

ಕಾರವಾರ:ಐದು ವರ್ಷದ ಆಡಳಿತ ಅವಧಿಯಲ್ಲಿ ಎಂದಿಗೂ ಕಾಣದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಅವರು ಕಾರವಾರದ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ನಮ್ಮದ ದೇಶದ ಭ್ರಷ್ಟಾಚಾರದ ಮೂಲ ಒಂದು ಕುಟುಂಬ. ಈ ಕುಟುಂಬ ಸದಸ್ಯರಿಂದ ಕಳೆದ 70 ವರ್ಷಗಳಿಂದ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅವರು ವ್ಯಂಗ್ಯವಾಡಿದರು. ದೇಶದ ಅತೀ ಸೂಕ್ಷ್ಮರಕ್ಷಣಾ ನಿರ್ಧಾರದಲ್ಲೂ ಸಹ ಮೂಗು ತೂರಿಸಿ ಡೀಲ್ ಮಾಡಿಕೊಳ್ಳುತ್ತಿದ್ದ ಆ ಕುಟುಂದ ಅಧಿಕಾರ ವಂಚಿತತೆಯಿಂದ ಈಗ ಹತಾಶೆಯಲ್ಲಿದೆ.

ದೇಶದ ಹಿಂದಿನ ಎಲ್ಲಾ ರಕ್ಷಣಾ ವ್ಯವಹಾರಗಳಲ್ಲಿಯೂ ಡೀಲ್ ಮಾಡಿಕೊಳ್ಳುತ್ತಿದ್ದ ಇವರು ಅಧಿಕಾರಕ್ಕಾಗಿ ಚಡಪಡಿಸುತ್ತಿದ್ದಾರೆ. ಅಗಸ್ಟಾ ವೆಸ್ಟಲ್ಯಾಂಡ್ ಹೆಲಿಕಾಪ್ಟರ್ ಡೀಲ್‌ನಲ್ಲಿ ಈ ಕುಟುಂಬ ಪಾಲುದಾರರಾಗಿದ್ದರು ಎಂದು ಈಗ ಬಂಧನದಲ್ಲಿರುವ ವ್ಯವಹಾರದ ಮಧ್ಯವರ್ತಿ ಕ್ರಿಶ್ಚಿಯನ್ ಮೈಖೆಲ್ ಹೇಳಿಕೆ ನೀಡಿದ್ದಾನೆ. ಇಂಥ ಕುಟುಂಬದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಕುಟುಂಬವೇ ಈಗ ರಫೇಲ್ ಡೀಲ್‌ನಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದ ಅವರು, ಅಭದ್ರತೆಯಿಂದ ಸೋಲಿನ ಭೀತಿಯಿಂದ ಯುಪಿಯ ಅಮೇಥಿಯಿಂದ ಕೇರಳದ ವಾಯನಾಡಿಗೆ ಓಡಿ ಹೋಗಿ ಈ ಕುಟುಂಬ ಚುನಾವಣೆಗೆ ಸ್ಪರ್ಧಿಸುವಂತಾಗಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಸಂಸದ ಅನಂತಕುಮಾರ್ ಹೆಗಡೆ, ಶಾಸಕಿ ರೂಪಾಲಿ ನಾಯ್ಕ ಹಾಗೂ ಇನ್ನಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.