ಯಡಹಳ್ಳಿ ಕಾಲೇಜು: ಶೇ.90 ಫಲಿತಾಂಶ

ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತಾಲೂಕಿನ ಯಡಹಳ್ಳಿಯ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗವು ಶೇ.90ರಷ್ಟು ಸಾಧನೆ ಮಾಡಿದೆ.

ಕಾಲೇಜಿಗೆ ಅನನ್ಯ ಅನಂತ ಹೆಗಡೆ ಹಾಗೂ ಪ್ರಜ್ವಲ್ ಎಸ್.ಭಟ್ಟ 600ಕ್ಕೆ 565 ಅಂಕ ಪಡೆದು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಗೌರಿ ಚ ಹೆಗಡೆ 539 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಶಶಾಂಕ ಎಂ ಪಿ 536 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾನೆ. ಕಲಾ ವಿಭಾಗದಲ್ಲಿ ರಾಜು ಸಗರವಳ್ಳಿ 467 ಅಂಕ ಪಡೆದು ಪ್ರಥಮ, 449 ಅಂಕ ಪಡೆದ ದೀಪ್ತಿ ಹೆಗಡೆ ದ್ವಿತೀಯ, 403 ಅಂಕ ಪಡೆದ ಪ್ರಶಾಂತ ಗೌಡ ತೃತೀಯ ಸ್ಥಾಮ ಪಡೆದಿದ್ದಾರೆ.

ಸಂಸ್ಕೃತ ವಿಭಾಗದಲ್ಲಿ ಓರ್ವ ವಿದ್ಯಾರ್ಥಿ ಭೂಗೋಳ, ಇನ್ನೋವ ವಿದ್ಯಾರ್ಥಿ ಅರ್ಥಶಾಸ್ತ್ರದಲ್ಲಿ, ಮೂವರು ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಮಿತಿ ಅಧ್ಯಕ್ಷ ಶ್ರೀಧರ ಹೆಗಡೆ ಮಶೀಗದ್ದೆ, ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ, ಪ್ರಾಚಾರ್ಯ ಆರ್.ಟಿ.ಭಟ್ಟ ಇತರರು ಅಭಿನಂದಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.