ಮಹಿಳೆಯರೇ ಮನೆ-ಮನೆಗೆ ತೆರಳಿ ಮತಯಾಚನೆ.!! ಎಲ್ಲಿ ಗೊತ್ತಾ..??


ಗೋಕರ್ಣ: ದಿನನಿತ್ಯ ಮನೆಗೆ ಬರುವ ಯಾತ್ರಿಕರಿಗೆ ಊಟ ತಿಂಡಿ ನೀಡುತ್ತಾ ಬಿಡುವಿಲ್ಲದೆ ಮನೆಕೆಲಸದಲ್ಲಿ ನಿರತವಿರುವ ಇಲ್ಲಿನ ವೈದಿಕರ ಮನೆಯ ಕೆಲ ಮಹಿಳೆಯರು ಒಂದಷ್ಟು ಸಮಯ ಮತಯಾಚನೆಗೆ ಮೀಸಲಿಟ್ಟು ಸ್ವಯಂ ಪ್ರೇರಿತರಾಗಿ ಮನೆ- ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವುದು ವಿಶೇಷವಾಗಿದ್ದು, ಈ ಭಾಗದ ಚುಣಾವಣಾ ಪ್ರಚಾರಕ್ಕೆ ಹೊಸ ಆಯಾಮದೊರೆತಿದೆ.

ನಮಗೆ ಮೋದಿ ಮೊತ್ತೊಮ್ಮೆ ಪ್ರಧಾನಿಯಾಗಬೇಕು ವಿಶ್ವವೇ ಇಂದು ಹಾಡಿ ಹೊಗಳುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ಭಾರತ ಘನತೆ ಗೌರವವನ್ನಾ ಹೆಚ್ಚಿಸಿದ್ದಾರೆ, ತಾವು ವಿಶ್ರಮಿಸದೆ ನಿರಂತರ ದೇಶದ ಮುನ್ನಡೆಸುವ ಕಾರ್ಯದಲ್ಲಿ ನಿಂತಿರುವಾಗ, ಇವರ ಆಯ್ಕೆಯ ಸಲುವಾಗಿ ನಾವು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇವೆ ಎನ್ನುತ್ತಾರೆ. ಪ್ರತಿ ಮನೆಗೆ ಭೇಟಿ ನೀಡಿ ಮತಯಾಚಿಸುತ್ತಿರುವುದು ಕಂಡು ಬಂತು. ಈಗಾಗಲೇ ಮಹಿಳಾ ಸಂಘದ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಡಾ. ಶೀಲಾ ಹೊಸ್ಮನೆ, ಜಾನಕಿ ಜೋಗಳೇಕರ, ನಿರ್ಮಲಾ ಮಾರ್ಕಾಂಡೆ, ಕಮಲಾ ಉಪ್ಪುಂದ, ಮಂಗಲಾ ಹೆಗಡೆ ಸೇರಿದಂತೆ ಹಲವರು ಇದ್ದಾರೆ, ಇವರ ಜೊತೆ ಸ್ಥಳೀಯ ಬಿ.ಜೆ.ಪಿ.ಕಾರ್ಯಕರ್ತರಾದ, ತಾಂ. ಪಂ.ಸದಸ್ಯ ಮಹೇಶ ಶೆಟ್ಟಿ, ಜಯರಾಮ ಹೆಗಡೆ, ಸತೀಶ ಭಂಡಾರಿ, ಗ್ರಾಂ. ಪಂ. ಸದಸ್ಯ ರಮೇಶ ಪ್ರಸಾದ ಮುಂತಾದರವರು ಸಾಥ್ ನೀಡುತ್ತಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.