ಪಿಯು ಫಲಿತಾಂಶ: ಭದ್ರಕಾಳಿ ಕಾಲೇಜು ಶೇಕಡಾ 87 ರಷ್ಟು ದಾಖಲೆ

ಗೋಕರ್ಣ: 2018-19 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿಯ ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇಕಡಾ 87% ರಷ್ಟು ದಾಖಲೆ ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 06 ವಿದ್ಯಾರ್ಥಿಗಳು ಶೇಕಡಾ 80% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದು ಸುಚಿತ್ರಾ ಗಣಪತಿ ನಾಯ್ಕ ಇವಳು 600ಕ್ಕೆ 555 ಅಂಕಗಳನ್ನು ಪಡೆದು ಶೇಕಡಾ 92.5% ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮಳಾಗಿದ್ದಾಳೆ. ಭಾರ್ಗವ ಗಣಪತಿ ಭಟ್ಟ ಹಿರೇ ಶೇಕಡಾ 90.5%(543) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ  ಚಂದ್ರಕಲಾ ಪೊಕ್ಕ ಗೌಡ ಶೇಕಡಾ 88.16%(529) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿರುತ್ತಾಳೆ. ಅಲ್ಲದೇ ವಿದ್ಯಾಶ್ರೀ ದೇವು ಗೌಡ ಶೇಕಡಾ 86.16%(517),  ಯಶೋಧಾ ಹೊನ್ನಪ್ಪ ಗೌಡ ಶೇಕಡಾ 84.83%(509), ಸೀಮಾ ಗಣಪತಿ ಗೌಡ ಶೇಕಡಾ 84.33%(506) ಅಂಕಗಳನ್ನು ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಯಾದವಿ ತಿಮ್ಮಪ್ಪ ಗೌಡ ಶೇಕಡಾ 87.83%(527) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಜ್ಯೋತಿ ಗಣಪತಿ ಗೌಡ ಶೇಕಡಾ 86.5%(519) ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಮಂಗಲಾ ಗಣಪತಿ ಗೌಡ ಶೇಕಡಾ 84.16%(505) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಪರೀಕ್ಷೆಗೆ ಕುಳಿತ 98 ವಿದ್ಯಾರ್ಥಿಗಳಲ್ಲಿ 07 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 85 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜಿನ ಒಟ್ಟಾರೆ ಫಲಿತಾಂಶ ಶೇಕಡಾ 87%ರಷ್ಡು ಆಗಿದೆ. ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಕೆ.ಎಸ್.ಪಿ.ಮಂಡಳದ ಚೇರಮನ್‍ರಾದ ಡಾ|| ವ್ಹಿ.ಆರ್.ಮಲ್ಲನ್, ಕಾರ್ಯದರ್ಶಿಗಳಾದ ಜಿ.ಎನ್.ನಾಯಕ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಎಸ್.ಸಿ.ನಾಯಕ್, ಸಿಬ್ಬಂದಿ ಪ್ರತಿನಿಧಿ ಶ್ರೀ ರಾಮಮೂರ್ತಿ ನಾಯಕ, ಉಪನ್ಯಾಸಕವೃಂದ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.