ದೋಸ್ತಿ ಅಭ್ಯರ್ಥಿ ಆನಂದ, ಅನಂತನ ಮೇಲೆ ಟೀಕೆ ಮಾಡುವುದು ಬಿಡಲಿ: ವಿಶಾಲ್ ಮರಾಠೆ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ದೋಸ್ತಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಮೇಲೆ ಟೀಕಾ ಪ್ರಹಾರ ಮಾಡಯವುದನ್ನು ಬಿಟ್ಟು ಚುನಾವಣೆಯಲ್ಲಿ ತಮ್ಮ ಇಡಿಗಂಟು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಿರಸಿ ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ವಿಶಾಲ್ ಮರಾಠೆ ಟೀಕಿಸಿದ್ದಾರೆ.

ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆನೆಯಂತೆ ನಡೆಯುತ್ತೇನೆ ಎಂದು ಅಸ್ನೋಟಿಕರ್ ಹೇಳುತ್ತಾರೆ. ಆದರೆ ಮೇ.23 ಕ್ಕೆ ಯಾರು ಆನೆ ಎಂದು ತಿಳಿಯುತ್ತದೆ. ಪ್ರತಿಸ್ಪರ್ಧೆಯೇ ಇಲ್ಲದ ಚುನಾವಣೆ ಇದಾಗಿದ್ದು, ಅನಂತಕುಮಾರ ಹೆಗಡೆ ಗೆಲುವು ನಿಶ್ಚಿತ ಎಂದರು.

ಅನಂತಕುಮಾರ ಹೆಗಡೆ ಅವರು ಯುವಕರ ಪಾಲಿನ ಆಶಾಕಿರಣವಾಗಿದ್ದಾರೆ. ಲಕ್ಷಾಂತರ ಯುವಕರು ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ತಿಳಿದುಕೊಂಡಿದ್ದಾರೆ. ರಾಷ್ಟ್ರೀಯತೆ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡವರು ಅವರಲ್ಲ. ಅಂತವರ ಬಗ್ಗೆ ವಿರೋಧ ಪಕ್ಷದ ನಾಯಕರು ಲಘುವಾಗಿ ಮಾತನಾಡುವುದು ಖಂಡನೀಯ. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲೆಗೆ ಹೆಗಡೆ ಅವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರ ಅಭಿವೃದ್ಧಿ ಸಾಧನೆಯೆ ಅವರ ಗೆಲುವಿಗೆ ಸಹಕಾರಿಯಾಗಲಿದೆ. ಗೆಲುವು ನಿಶ್ಚಿತ ವಾಗಿದ್ದು, ಗೆಲುವಿನ ಅಂತರ ನೋಡಲು ಜಿಲ್ಲೆಯ ಜನರು ಕುತೂಹಲದಿಂದ ಇದ್ದಾರೆ ಎಂದ ವಿಶಾಲ್ ,ಜನರ ಕೈಗೆ, ಕಾರ್ಯರ್ತರಿಗೆ ಸುಲಭವಾಗಿ ಸಿಗುವ ಸಚಿವರು ಮತ್ತೊಮ್ಮೆ ಆಯ್ಕೆಯಾಗಿ ಜಿಲ್ಲಯ ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಈ ವೇಳೆ ಪ್ರಮುಖರಾದ ರವೀಶ ಹೆಗಡೆ ಮಾಳೇನಳ್ಳಿ, ಸುದರ್ಶನ ವೈದ್ಯ, ನಾಗರಾಜ ನಾಯ್ಕ ಇನ್ನಿತರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.