ಏ.17ಕ್ಕೆ ಮಹಿಷಾಸುರ ಮರ್ದಿನಿ ಅಭಿವೃದ್ಧಿ ಸಮಿತಿಯ ವಾರ್ಷಿಕೋತ್ಸವ

ಸಿದ್ದಾಪುರ: ತಾಲೂಕಿನ ಘಟ್ಟಿಕೈನ ಮಹಿಷಾಸುರ ಮರ್ದಿನಿ ಅಭಿವೃದ್ಧಿ ಸಮಿತಿಯ 2ನೇ ವಾರ್ಷಿಕೋತ್ಸವದ ಅಂಗವಾಗಿ ನಾಗದೇವರ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಏ.17ರಂದು ನಡೆಯಲಿದೆ.

ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ವೃತ, ಮಹಾಮಂಗಳಾರತಿ, ಅನ್ನಸಂತರ್ಪಣೆ. ಸಂಜೆ 6ರಿಂದ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಂತರ ರಾತ್ರಿ 10 ರಿಂದ ಚಂದ್ರಹಾಸ ಚರಿತ್ರೆ ಮತ್ತು ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣಪತಿ ಭಟ್ಟ ಬರತೋಟ, ಗಜಾನನ ಹೆಗಡೆ ತುಳಗೇರಿ, ಶ್ರೀಪತಿ ಹೆಗಡೆ ಕಂಚಿಮನೆ, ವಿಠ್ಠಲ ಪೂಜಾರಿ, ಗಂಗಾಧರ ಹೆಗಡೆ ಸಹಕರಿಸಲಿದ್ದಾರೆ.

ಮಹಾಬಲೇಶ್ವರ ಹೆಗಡೆ ಕನ್ನಳ್ಳಿ, ಕಾರ್ತಿಕ ಚಿಟ್ಟಾಣಿ, ಗಣಪತಿ ಭಟ್ಟ ಮುದ್ದಿನಪಾಲ್, ನಾಗರಾಜ ಕೊಂಕಿಪಾಲ್, ಸದಾನಂದ ಕುಮಟಾ, ಲಕ್ಷ್ಮಣ ಪಟಗಾರ, ಮಹಾಬಲೇಶ್ವರ ಗೌಡ, ವೆಂಕಟ್ರಮಣ ಹೆಗಡೆ ಮಾದನಕಳ್,ವಾಸು ನಾಯ್ಕ, ರಾಮಚಂದ್ರ ಆಡುಕಟ್ಟಾ,ಬಾಬಣ್ಣ ಕಾಳೇನಳ್ಳಿ,ಎಂ.ಟಿ.ನಾಯ್ಕ ಇತರರು ಪಾತ್ರ ನಿರ್ವಹಿಸಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.